ಹೈದರಾಬಾದ್(ತೆಲಂಗಾಣ):ಕಳೆದ ಮೂರು ದಿನಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ವಿಷರಹಿತ ಹಾವೊಂದು ಕಚ್ಚಿ, ಆಸ್ಪತ್ರೆಯಲ್ಲಿ ಕೆಲ ಗಂಟೆಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ 21 ವರ್ಷದ ಅಮೆರಿಕದ ಪಾಪ್ ಸಿಂಗರ್ ಹಾಗೂ ನಟಗೆ ಹಾವು ಕಚ್ಚಿರುವ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶೂಟಿಂಗ್ವೊಂದರಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅಮೆರಿಕದ ಪಾಪ್ ಗಾಯಕಿ ಮೇಟಾ ಅವರಿಗೆ ಹಾವು ಕಚ್ಚಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ವಾರ ನಡೆದಿರುವ ಘಟನೆ ಇದಾಗಿದ್ದು, ಸದ್ಯ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪಾಪ ನಟಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಹ ಪೋಸ್ಟ್ ಮಾಡಿದ್ದಾರೆ.