ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲುಸಿನಿಮಾ ಎಂದು ಗುರುತಿಸಲ್ಪಟ್ಟಿದೆ. ಅಮೆರಿಕದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಚಲನಚಿತ್ರಕ್ಕೆ ಇದೀಗ ಬೆಳ್ಳಿಹಬ್ಬದ ಸಡಗರ.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ರವೀಂದ್ರನಾಥ್-ಸಂಧ್ಯಾ ಎಂಬವರ ಮನೆಯಲ್ಲಿ ಇದೇ ದಿನ ಚಿತ್ರೀಕರಣ ಪ್ರಾರಂಭವಾಗಿತ್ತು. ಅದಕ್ಕೂ ಮುನ್ನ ‘ಉಂಡು ಹೋದ ಕೊಂಡು ಹೋದ’, ‘ಬಾ ನಲ್ಲೆ ಮಧುಚಂದ್ರಕೆ’ ಮತ್ತು ‘ಕೊಟ್ರೇಶಿ ಕನಸು’ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗತಿಹಳ್ಳಿ, ಅದೇ ಮೊದಲ ಬಾರಿಗೆ ಒಂದು ತ್ರಿಕೋನ ಪ್ರೇಮಕಥೆಯನ್ನು ಅಮೆರಿಕದಂತಹ ದೇಶದಲ್ಲಿ ಚಿತ್ರೀಕರಿಸಿದ್ದರು.
ಈ ಚಿತ್ರವು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜೊತೆ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರ, ನಟ ಮತ್ತು ಕಥೆ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.
ನಟರಾದ ದತ್ತಣ್ಣ, ಹೇಮಾ ಪಂಚಮುಖಿ, ರಮೇಶ್ ಅರವಿಂದ್ ವಿಶ್ವಪ್ರಿಯ ಫಿಲಂಸ್ ಬ್ಯಾನರ್ ಅಡಿ ನಂದಕುಮಾರ್ ನಿರ್ಮಿಸಿದ ಈ ಚಿತ್ರದ ಮೂಲಕ ಪ್ರತಿಭಾವಂತ ಸಂಗೀತ ನಿರ್ದೇಶಕ ಮನೋಮೂರ್ತಿ, ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದರು. ಸಿನಿಮಾದಲ್ಲಿ ಶಶಾಂಕ್ ಪಾತ್ರವನ್ನು ಮೊದಲು ನಟ ಪ್ರಕಾಶ್ ರೈ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಅಕ್ಷಯ್ ಆನಂದ್ ಅವರ ಪಾಲಾಯಿತು ಎಂದು ಹೇಳಲಾಗುತ್ತದೆ. ಮಿಕ್ಕಂತೆ ರಮೇಶ್ ಅರವಿಂದ್, ಹೇಮಾ ಪಂಚಮುಖಿ, ದತ್ತಣ್ಣ, ವೈಶಾಲಿ ಕಾಸರವಳ್ಳಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದರು.
‘ಅಮೆರಿಕಾ ಅಮೆರಿಕಾ’ ಸಿನಿಮಾ ಪೋಸ್ಟರ್ ಚಿತ್ರವನ್ನು ಉಡುಪಿ, ಚಿಕ್ಕಮಗಳೂರು, ಅಮೆರಿಕ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿತ್ತು. 1997ರಲ್ಲಿ ಬಿಡುಗಡೆಯಾದ ಈ ಚಿತ್ರ 25 ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು.
‘ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ ಇದೀಗ ಬೆಳ್ಳಿ ಸಂಭ್ರಮದ ಹಿನ್ನೆಲೆಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹಂಚಿಕೊಂಡಿದ್ದಾರೆ.