ರೆಬಲ್ ಸ್ಟಾರ್ ಅಂಬರೀಶ್ ಇಂದು ಬದುಕಿದ್ದರೆ, ಸಾವಿರಾರು ಅಭಿಮಾನಿಗಳ ಜೊತೆ 68ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ರು. ಅಂಬರೀಶ್ ಐಶಾರಾಮಿ ಜೀವನ ಶೈಲಿ ನೋಡಿ, ಆ ಯಮರಾಜನಿಗೂ ಹೊಟ್ಟೆ ಹುರಿ ಬಂದಿರಬೇಕು. ಅದಕ್ಕೆ ಅಂಬರೀಶ್ ನನ್ನು ಬೇಗನೆ ಮೇಲಕ್ಕೆ ಕರೆಯಿಸಿಕೊಂಡ ಅನಿಸುತ್ತೆ. ಆದರೆ ಅಂಬರೀಶ್ ಸಿನಿಮಾಗಳಲ್ಲಿ ಹೊಡೆದ ಪಂಚಿಂಗ್ ಡೈಲಾಗ್ಗಳ ಇವತ್ತಿಗೂ ಜೀವಂತವಾಗಿದೆ.
ರೆಬಲ್ ಸ್ಟಾರ್ ಅಂಬರೀಷ್ ಆಗೋದಿಕ್ಕಿಂತ ಮುಂಚೆ, ಈ ಮಂಡ್ಯದ ಗಂಡಿನ ಮೊದಲ ಹೆಸರು ಅಮರನಾಥ. ನೋಡೋದಕ್ಕೆ ಬಾಲಿವುಡ್ನ ಶತ್ರುಘ್ನ ಸಿನ್ಹಾ ತರಹ ಇದ್ದ ಅಂಬರೀಶ್ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಇಂಟ್ರಸ್ಟಿಂಗ್.
ಕಾಲೇಜ್ ಟೈಮ್ನಲ್ಲಿ ಲೀಡರ್ ಶಿಪ್ ಕ್ವಾಲಿಟಿ ಹೊಂದಿದ್ದ ಅಮರನಾಥ, 1972ರಲ್ಲಿ ಬಂದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಆದರೆ, ಈ ಚಿತ್ರ ಅಮರನಾಥನ ಅಂಬರೀಶ್ ಆಗಿ ಬದಲಾಯಿಸುತ್ತದೆ ಅಂತಾ ಸ್ವತಃ ಅಂಬರೀಶ್ ಅಂದುಕೊಂಡಿರಲಿಲ್ಲ.
ಈ ಚಿತ್ರದಲ್ಲಿ ಡಾ ವಿಷ್ಣುವರ್ಧನ್ ಎದುರು ಅಂಬರೀಶ್ ವಿಲನ್ ಆಗಿ ಕಾಣಿಸಿಕೊಂಡಿದ್ರು. ಈ ಚಿತ್ರದ ಬಳಿಕ ವಿಷ್ಣುವರ್ಧನ್ ಹಾಗೂ ಅಂಬರೀಶ್ ಕುಚಿಕು ಗೆಳೆಯರು ಆಗ್ತಾರೆ. ಅಂತಾ ಯಾರು ಊಹಿಸಿರಲಿಲ್ಲ.ಅಂದಿನಿಂದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಗೆಳೆಯರು ಅಲ್ಲದೇ ಸಾಕಷ್ಟು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದಾರೆ.
ನಾಗರಹಾವು ಚಿತ್ರದಲ್ಲಿ ಅಂಬರೀಶ್ ಹೊಡೆಯುವ ಬುಲ್ ಬುಲ್ ಡೈಲಾಗ್, ಆವತ್ತಿನ ದಿನಗಳಲ್ಲಿ ಕಾಲೇಜು ಹುಡುಗರ ಫೇವರಿಟ್ ಡೈಲಾಗ್ ಆಗಿತ್ತು. ಈ ಚಿತ್ರದಲ್ಲಿ ಕೇವಲ 15 ನಿಮಿಷ ಬರುವ ಅಂಬರೀಶ್ ಈ ಚಿತ್ರದ ಒಂದು ಡೈಲಾಗ್, ಹಲವಾರು ನಟರು ತಮ್ಮ ಸಿನಿಮಾಗಳಲ್ಲಿ ಈ ಡೈಲಾಗ್ ಬಳಸಿಕೊಂಡಿದ್ದಾರೆ.