ಈ ವರ್ಷ ಅಂಬರೀಶ್ ಇಲ್ಲದೆಯೇ ಅವರ ಹುಟ್ಟುಹಬ್ಬ ಆಚರಣೆ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಲೇ ಇತ್ತು. ಚುನಾವಣೆ ಆದಮೇಲೆ ಅದರೆ ಬಗ್ಗೆ ಚಿಂತನೆ ಎಂದು ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಹೇಳುತ್ತಾ ಬಂದಿದ್ರು.
ಆದ್ರೆ, ಈಗ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು ಲೋಕಸಭಾ ಸದಸ್ಯೆ ಆಗಿದ್ದಾರೆ. ಈ ಸಂತೋಷವನ್ನು ಅವರು ಮಂಡ್ಯ ಜಿಲ್ಲೆಯಲ್ಲಿ ಹಂಚಿಕೊಳ್ಳಲು ಮುಂದಾಗಿದ್ದು, ಅದು ವಿಶೇಷ ದಿನವೇ ಈ ವಿಜಯೋತ್ಸವ ಆಚರಣೆಗೆ ಮುಂದಾಗಿದ್ದಾರೆ.
ಸುಮಲತಾ ತಮ್ಮ ಗೆಲುವಿಗೆ ಸ್ವಾಭಿಮಾನಿ ಮಂಡ್ಯ ಜನರೇ ಕಾರಣ ಎಂದು ಸಾರಿ ಸಾರಿ ಹೇಳಿದ್ದಾರೆ. ಈ ನಡುವೆಯೇ ಮೇ 29 ಅಂಬಿ ಹುಟ್ಟುಹಬ್ಬ ಅದೇ ದಿನವೇ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ವಾಭಿಮಾನದ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದಾರೆ. ವಿಜಯೋತ್ಸವದಲ್ಲಿ ಮಗ ಅಭಿಷೇಕ್, ಡಿ ಬಾಸ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಹಾಗೂ ಇನ್ನಿತರು ಆಗಮಿಸಲಿದ್ದಾರೆ.
ಸುಮಲತಾ ಅಂಬರೀಶ್ ಚುನಾವಣಾ ಕಣಕ್ಕೆ ಬಂದಾಗ ಜೆಡಿಎಸ್ ಆಗಲಿ ಕಾಂಗ್ರೆಸ್ ಪಕ್ಷ ಆಗಲಿ ಅವರನ್ನು ಪ್ರೋತ್ಸಾಹಿಸಲಿಲ್ಲ, ಭಾರತೀಯ ಜನತಾ ಪಾರ್ಟಿ ಅವರನ್ನು ಬೆಂಬಲಿಸಿದ್ದು, ಸುಮಲತಾ ಅಂಬರೀಶ್ ಎಸ್.ಎಂ ಕೃಷ್ಣ ಹಾಗೂ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಬೆಂಬಲ ಯಾಚಿಸಿದ್ದರು. ಹೀಗಾಗಿ ಅವರು ಬಿಜೆಪಿ ಸೇರ್ತಾರಾ ಎಂಬುದೇ ಸದ್ಯದ ಕುತೂಹಲವಾಗಿದೆ.