ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರದ ಮಸ್ಸಂಗ್ ಬಾರೋ 'ಪೈಲ್ವಾನ್' ಚಿತ್ರದಲ್ಲಿ ಲಿರಿಕಲ್ ವಿಡಿಯೋ ಮಂಗಳವಾರ ರಿಲೀಸ್ ಆಗಿತ್ತು. ಬಿಡುಗಡೆಯಾದ 24 ಗಂಟೆಯೊಳಗೆ ಒಂದು ಮಿಲಿಯನ್ಗೂ ಹೆಚ್ಚು ಮಂದಿ ಸಾಂಗ್ ವೀಕ್ಷಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಕಿಚ್ಚ ಸುದೀಪ್ ಹಾಗೂ ಕನ್ನಡಿಗ ಸುನಿಲ್ ಶೆಟ್ಟಿ ಅವರ ಕಾಂಬಿನೇಷನ್ನಲ್ಲಿ ಬಂದಿರುವ ಈ ಹಾಡು ಕಿಚ್ಚನ ಭಕ್ತಗಣವನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇನ್ನು ಚಿತ್ರದ ಹಾಡುಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ನಿರ್ದೇಶಕ ಕೃಷ್ಣ ಈಟಿವಿ ಭಾರತ್ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಮಸ್ಸಂಗ್ ಬಾರೋ 'ಪೈಲ್ವಾನ್' ಚಿತ್ರದ ಲಿರಿಕಲ್ ವಿಡಿಯೋ ಟೀಂ ವರ್ಕ್ನಲ್ಲಿ ಸಾಂಗ್ಗಳನ್ನು ಮಾಡಿ ಜನರ ಮುಂದೆ ಬರಬೇಕಾದರೆ ನಮಗೂ ಸಹ ಭಯ ಇರುತ್ತೆ. ಜನರಿಗೆ ನಾವು ಮಾಡಿದ ಕೆಲಸ ಇಷ್ಟವಾಗುತ್ತೋ ಇಲ್ಲವೋ ಎಂಬ ಒಂದು ಭಯದಲ್ಲಿ ನಾವು ಒಂದು ಟೀಂ ವರ್ಕ್ನಲ್ಲಿ ಕೆಲಸ ಮಾಡ್ತೇವೆ. ನಮ್ಮ ಕೆಲಸವನ್ನು ಜನರು ಸ್ವಾಗತಿಸಿದಾಗ ಅದರಲ್ಲೂ ಕನ್ನಡವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಿ ಭಾಷೆಯ ಜನರು ಸಾಂಗ್ ಕೇಳಿ ಮೆಚ್ಚಿಕೊಂಡಿರುವುದು ನಮಗೂ ಸಂತೋಷವಾಗುತ್ತದೆ. ಅಲ್ಲದೆ ಕನ್ನಡ ಹಾಡನ್ನು ಯುನಿವರ್ಸಲ್ ಆಗಿ ಇಷ್ಟಪಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ನಿರ್ದೇಶಕ ಕೃಷ್ಣ, 'ಪೈಲ್ವಾನ್' ಬ್ಯುಸಿನೆಸ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು.
'ಪೈಲ್ವಾನ್' ನಿರ್ದೇಶಕ ಕೃಷ್ಣ ಈ ಟಿವಿ ಭಾರತ್ ಜೊತೆ ಈಗಾಗಲೇ 'ಪೈಲ್ವಾನ್' ಚಿತ್ರದ ಕುರಿತು ಅಮೆಜಾನ್ ಜೊತೆ ಮಾತುಕತೆಯಾಗಿದೆ. ಅಲ್ಲದೆ ಜೀ ಕನ್ನಡಕ್ಕೆ ಒಂದು ಒಳ್ಳೆ ಮೊತ್ತಕ್ಕೆ ಸೇಲ್ ಆಗಿದೆ. ಇದರ ಜೊತೆಗೆ ಹಿಂದಿಯ ಸ್ಯಾಟಲೈಟ್ಸ್ ವಿಚಾರವಾಗಿ ದೊಡ್ಡ ಚಾನೆಲ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಡಿಜಿಟಲ್ ಬ್ಯುಸಿನೆಸ್ ವಿಚಾರವಾಗಿ 'ಪೈಲ್ವಾನ್' ಒಳ್ಳೆ ಗಳಿಕೆ ಮಾಡಿದೆ ಎಂದು ನಿರ್ದೇಶಕ ಕೃಷ್ಣ ಮಾಹಿತಿ ನೀಡಿದ್ದಾರೆ.
ಅಲ್ಲದೆ ಥಿಯೇಟರ್ ಬ್ಯುಸಿನೆಸ್ ವಿಚಾರವಾಗಿ ಸಹ 'ಪೈಲ್ವಾನ್'ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಒಳ್ಳೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನನಗೆ ತುಂಬಾ ಖುಷಿಯ ಸಂಗತಿ ಅಂದ್ರೆಪ್ರೊಡಕ್ಷನ್ ಆರಂಭಿಸಿದಮೊದಲ ಚಿತ್ರದಲ್ಲೇ ಉತ್ತಮ ರೆಸ್ಪಾನ್ಸ್ ಸಿಕ್ಕಿರುವುದು ತುಂಬ ಖುಷಿಯಾಗಿದೆ ಎಂದರು.
'ಪೈಲ್ವಾನ್' ಚಿತ್ರದ ಪೋಸ್ಟರ್ ಅಲ್ಲದೆ 'ಪೈಲ್ವಾನ್' ಚಿತ್ರದ ರಿಲೀಸ್ ಡೇಟ್ ಆಗಸ್ಟ್ 29 ರಿಂದ ಸೆಪ್ಟೆಂಬರ್ 12 ಕ್ಕೆ ಹೋಗಿರುವುದಕ್ಕೆ ಸ್ಪಷ್ಟನೆ ನೀಡಿರುವ ನಿರ್ದೇಶಕರು, ಒಂದು ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಮಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ನಮ್ಮ 'ಪೈಲ್ವಾನ್' ಚಿತ್ರವನ್ನು ದೇಶಾದ್ಯಂತ ರಿಲೀಸ್ ಮಾಡುತ್ತಿರುವುದರಿಂದ ಹಿಂದಿ ಹಾಗೂ ತೆಲುಗಿನಲ್ಲಿ ನಮಗೆ ಥಿಯೇಟರ್ಗಳ ಸಮಸ್ಯೆ ಉಂಟಾಗುವ ಸಾಧ್ಯತೆ ಇತ್ತು. ನಾವು 'ಪೈಲ್ವಾನ್' ಚಿತ್ರವನ್ನು ಎಂಟೈರ್ ಇಂಡಿಯಾದಲ್ಲಿ ಸುಮಾರು 2500 ರಿಂದ 3000 ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ಅದ್ರೆ ಸಾಹೋ ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆ ನಮಗೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇತ್ತು.
ಅಲ್ಲದೆ ಮುಂಬೈ ಹಾಗೂ ಆಂಧ್ರ ಪ್ರದೇಶದಲ್ಲಿ ಸುಮಾರು ಸಾವಿರದ 800ಕ್ಕೂ ಹೆಚ್ಚು ಸ್ಕ್ರೀನ್ಗಳು 'ಪೈಲ್ವಾನ್' ಗೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಡಿಸ್ಟ್ರಿಬ್ಯೂಟರ್ಗಳು ಸಿನಿಮಾವನ್ನು ಒಂದು ವಾರ ಅಥವಾ ಎರಡು ವಾರ ಪುಷ್ ಮಾಡಬಹುದ? ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಹಾಗಾಗಿ ಎಲ್ಲ ಡಿಸ್ಟ್ರಿಬ್ಯೂಟರ್ಗಳ ಜೊತೆ ಕುಳಿತು ಚರ್ಚಿಸಿ ಸಿನಿಮಾದ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕಿರುವುದಾಗಿ ನಿರ್ದೇಶಕ ಕೃಷ್ಣ ತಿಳಿಸಿದ್ರು.
ಕಿಚ್ಚ ಸುದೀಪ್ ಹಾಗೂ ಕನ್ನಡಿಗ ಸುನಿಲ್ ಶೆಟ್ಟಿ ಕಾಂಬಿನೇಷನ್ ಅಲ್ಲದೇ ಪೈಲ್ವಾನ್ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡೋದಕ್ಕಾಗಿ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ನಡೆಸಿರುವ ಕೃಷ್ಣ, ಸಿನಿಮಾವನ್ನು ತುಂಬಾ ಚೆನ್ನಾಗಿ ಬಿಡುಗಡೆ ಮಾಡುವ ಟೀಮ್ ಸಿಕ್ಕರೆ ಸೇಮ್ ಟೈಂನಲ್ಲಿ 'ಪೈಲ್ವಾನ್' ಚಿತ್ರವನ್ನು ವಿದೇಶದಲ್ಲೂ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.
ಇನ್ನು ಚಿತ್ರದಲ್ಲಿ ಸುದೀಪ್ ಹಾಗೂ ಸುನಿಲ್ ಶೆಟ್ಟಿ ಅವರ ಕಾಂಬಿನೇಷನ್ ವಿಚಾರವಾಗಿ ಮಾತನಾಡಿ, ಚಿತ್ರದಲ್ಲಿ ಸುನಿಲ್ ಶೆಟ್ಟಿ ಅವರ ಪಾತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಅಲ್ಲದೆ ಅವರದು ಗೆಸ್ಟ್ ಅಪಿರಿಯನ್ಸ್ ಅಲ್ಲ, ಪೈಲ್ವಾನ್ ಚಿತ್ರದ ಆರಂಭದಿಂದ ಮುಕ್ತಾಯದವರೆಗೆ ಸುನಿಲ್ ಶೆಟ್ಟಿ ಅವರ ಪಾತ್ರ ಕ್ಯಾರಿ ಆಗುತ್ತೆ. ಅದು ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಕೃಷ್ಣ ಚಿತ್ರದ ಕುರಿತು ಹಲವು ವಿಚಾರಗಳನ್ನು ವಿವರಿಸಿದರು.