ಅಮಲಾ ಪೌಲ್, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಯವಿರುವ ಹೆಸರು. ಆಕೆ ನಟಿಸಿರುವ 'ಆಡೈ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದೇ ತಡ, ಕಾಲಿವುಡ್, ಟಾಲಿವುಡ್, ಮಾಲಿವುಡ್ ಸಿನಿಮಾ ಸೆಲಬ್ರಿಟಿಗಳು ಆಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಆಡೈ' ನಂತರ ಮತ್ತೆ ನಗ್ನರಾದ್ರು ಅಮಲಾ ಪೌಲ್, ಯಾವ ಸಿನಿಮಾಗೆ ಹೀಗೆ? - ಮತ್ತೆ ನಗ್ನರಾದ್ರು ಅಮಲಾ ಪೌಲ್
ಸದ್ಯಕ್ಕೆ ಇಂಡೋನೇಷ್ಯಾದ ಬಾಲಿ ದ್ವೀಪದ ಪ್ರವಾಸದಲ್ಲಿರುವ ನಟಿ ಅಮಲಾ ಪೌಲ್, ಅಲ್ಲಿನ ರೂಮ್ನ ಬಾತ್ಟಬ್ ಒಂದರಲ್ಲಿ ನಗ್ನರಾಗಿ ಮುಳುಗಿ ಆ ಫೋಟೋಗಳನ್ನು ಕ್ಲಿಕ್ ಮಾಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

'ಆಡೈ' ಚಿತ್ರದಲ್ಲಿ ಅಮಲಾ ಪೌಲ್ ಒಂದು ದೃಶ್ಯಕ್ಕೆ ನಗ್ನರಾಗಿ ನಟಿಸಿದ್ದರು. ಈ ಮೂಲಕ ಯಾವ ನಟಿಯೂ ಮಾಡದಂಥ ಸಾಹಸ ಮಾಡಿದ್ದರು ಅಮಲಾ. ಈ ಸಿನಿಮಾ ವಿಜಯ ಕೂಡಾ ಸಾಧಿಸಿತು. ಇದೀಗ ಅಮಲಾ ಪೌಲ್ ಮತ್ತೆ ನಗ್ನರಾಗಿದ್ದಾರೆ. ಆದರೆ ಸಿನಿಮಾಗಾಗಿ ಅಲ್ಲ. ಬಾತ್ಟಬ್ ಒಂದರಲ್ಲಿ ಅಮಲಾ ನಗ್ನರಾಗಿ ಆ ಫೋಟೋಗಳನ್ನು ಕ್ಲಿಕ್ ಮಾಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಮಲಾ ಪೌಲ್ ಸದ್ಯಕ್ಕೆ ಬಾಲಿ ಪ್ರವಾಸದಲ್ಲಿದ್ದಾರೆ. ಅವರು ಉಳಿದುಕೊಂಡಿರುವ ರೂಮ್ ಪಕ್ಕ ಒಂದು ಸಣ್ಣ ತೊರೆ ಹರಿಯುತ್ತಿದೆ. ಆ ತೊರೆಗೆ ಹೊಂದಿಕೊಂಡಂತೆ ಇರುವ ರೂಮ್ನಲ್ಲಿ ಹೂವಿನ ದಳಗಳನ್ನು ತುಂಬಿದ ಬಾತ್ಟಬ್ನಲ್ಲಿ ಅಮಲಾ ಕತ್ತಿನವರೆಗೂ ಮುಳುಗಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಸ್ತುತ ಅಮಲಾ 'ಲಸ್ಟ್ ಸ್ಟೋರೀಸ್' ವೆಬ್ ಸೀರೀಸ್ ಜೊತೆಗೆ 'ಆಡು ಜೀವಿತಂ', 'ಕಾಡವರ್' ತಮಿಳು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.