ಇತ್ತಿಚೆಗೆ ಬಿಡುಗಡೆಯಾದ 'ಆಡೈ' ಸಿನಿಮಾ ಟೀಸರ್ನಲ್ಲಿ ಅಮಲಾ ಪೌಲ್ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಚಿತ್ರದ ಪೋಸ್ಟರ್ನಲ್ಲಿ ಕೂಡಾ ಅಮಲಾ ಅದೇ ರೀತಿ ಕಾಣಿಸಿಕೊಂಡಿದ್ದಾರೆ.
ಸುಂದರವಾಗಿ ಅಲಂಕಾರಗೊಂಡು ಕೈಯಲ್ಲಿ ಪೊರಕೆ ಹಿಡಿದಿರುವ ಅಮಲಾ ಪೌಲ್..! ಕಾರಣ ಏನು? - undefined
ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆಡೈ' ಸಿನಿಮಾದ ಮತ್ತೊಂದು ಪೋಸ್ಟರ್ ರಿವೀಲ್ ಆಗಿದ್ದು, ನಾಳೆ ಚಿತ್ರದ ಟ್ರೇಲರನ್ನು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬಿಡುಗಡೆ ಮಾಡಲಿದ್ದಾರೆ.

'ಆಡೈ' ಎಂದರೆ ಬಟ್ಟೆ ಎಂದರ್ಥ. ಈ ಟೈಟಲ್ ಮೂಲಕ ನಿರ್ದೇಶಕರು ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೋ ಕಾದುನೋಡಬೇಕು. ಟೀಸರ್ ನೋಡಿದ ಬಹಳಷ್ಟು ಸೆಲಬ್ರಿಟಿಗಳು ಆಶ್ಚರ್ಯಗೊಂಡಿದ್ದರು. ಇಂತಹ ಪಾತ್ರ ಮಾಡಲು ಸಾಕಷ್ಟು ಧೈರ್ಯ ಕೂಡಾ ಇರಬೇಕು ಎಂದು ಅಮಲಾರನ್ನು ಹೊಗಳಿದ್ದರು. ಇದೀಗ ಚಿತ್ರದ ಹೊಸ ಪೋಸ್ಟರ್ ಕೂಡಾ ರಿವೀಲ್ ಆಗಿದ್ದು ಈ ಪೋಸ್ಟರ್ನಲ್ಲಿ ಅಮಲಾ ಪೌಲ್ ಕೆಂಪು ಸೀರೆ, ಒಡವೆ ಧರಿಸಿ, ಸುಂದರವಾಗಿ ಅಲಂಕರಿಸಿಕೊಂಡು ಕೈಯಲ್ಲಿ ಪೊರಕೆ ಹಿಡಿದು ನಿಂತಿದ್ದಾರೆ. ಈ ಪೋಸ್ಟರ್ ಕೂಡಾ ಭಾರೀ ಕುತೂಹಲ ಹುಟ್ಟಿಸಿದೆ.
ರತ್ನ ಕುಮಾರ್ ಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿ ಸ್ಟುಡಿಯೋಸ್ ಬ್ಯಾನರ್ ಅಡಿ ವಿಜಿ ಸುಬ್ರಮಣಿಯನ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ 'ಆಡೈ' ಟೀಸರನ್ನು ಬಿಡುಗಡೆ ಮಾಡಿದ್ದರು. ನಾಳೆ ನಿರ್ದೇಶಕ ಅನುರಾಗ್ ಕಶ್ಯಪ್ ಸಿನಿಮಾದ ಅಫಿಶಿಯಲ್ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾ ಜುಲೈ 19 ರಂದು ಬಿಡುಗಡೆಯಾಗಲಿದೆ.