ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ 'ಪುಷ್ಪ' ಪ್ಯಾನ್ ಇಂಡಿಯಾ ಚಿತ್ರತಂಡ ಮೊದಲ ಹಾಡನ್ನು ಇಂದು ಅನಾವರಣಗೊಳಿಸಲಾಗಿದೆ. ಬಹುನಿರೀಕ್ಷಿತ ಸಿನಿಮಾ ಪುಷ್ಟ ಡಿಸೆಂಬರ್ 25ರಂದು ದೇಶಾದ್ಯಂತ ಪಂಚ ಭಾಷೆಗಳಲ್ಲಿ ತೆರೆಮೇಲೆ ಬರಲಿದೆ.
ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದ ಹಾಡು ಪಂಚಭಾಷೆಯಲ್ಲಿ ರಿಲೀಸ್: ಕನ್ನಡದ 'ಜೋಕೆ ಜೋಕೆ ಜೋಕೆ' ಹಾಡು ನೋಡಿ.. - ನಟ ಅಲ್ಲು ಅರ್ಜುನ್ ಪುಷ್ಟ ಸಿನಿಮಾ
ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಟ ಸಿನಿಮಾದ ಹಾಡು ಇಂದು ಅನಾವರಣಗೊಂಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಮಿಲಿಯನ್ ವೀಕ್ಷಣೆ ಜೊತೆಗೆ 5.5 ಲಕ್ಷ ಲೈಕ್ ಗಳಿಸಿದೆ.
ಈ ಹಾಡು ಯುಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 5 ಮಿಲಿಯನ್ ವೀಕ್ಷಣೆ ಜೊತೆಗೆ 5.5 ಲಕ್ಷ ಲೈಕ್ ಗಳಿಸಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡು ತಮಿಳಿನಲ್ಲಿ ಓಡು ಓಡು, ತೆಲುಗಿನಲ್ಲಿ ದಕ್ಕೋ ದಕ್ಕೋ ಮೇಕಾ, ಮಲಯಾಳಂನಲ್ಲಿ ಓದು ಓದು, ಹಿಂದಿಯಲ್ಲಿ ಜಾಗೋ ಜಾಗೋ ಬಕ್ರೆ ಮತ್ತು ಕನ್ನಡದಲ್ಲಿ ಜೋಕೆ ಜೋಕೆ ಮೇಕೆ ಎಂದು ಹೆಸರಿಸಲಾಗಿದೆ. ಈ ಹಾಡಿಗೆ ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದ ಕನ್ನಡ ಹಾಡನ್ನು ಖ್ಯಾತ ಗಾಯಕ, ಕನ್ನಡಿಗ ವಿಜಯ್ ಪ್ರಕಾಶ್ ಹಾಡಿದ್ದಾರೆ.
ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.