ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಚಿತ್ರದ 'ಬುಟ್ಟ ಬೊಮ್ಮ ಬುಟ್ಟ ಬೊಮ್ಮ... ' ಹಾಡನ್ನು ಯಾರು ತಾನೇ ಕೇಳಿಲ್ಲ. ಈ ಹಾಡು ಎಷ್ಟು ಫೇಮಸ್ ಆಗಿದೆ ಎಂದರೆ ಚಿಕ್ಕ ಮಕ್ಕಳ ಬಾಯಲ್ಲೂ ಇದೇ ಹಾಡು ಕೇಳಿಬರುತ್ತಿದೆ. ಅಷ್ಟೇ ಅಲ್ಲ ಈ ಹಾಡಿಗೆ ಸಾಕಷ್ಟು ಜನ ಟಿಕ್ಟಾಕ್ ಕೂಡಾ ಮಾಡಿದ್ಧಾರೆ.
'ಬುಟ್ಟ ಬೊಮ್ಮ' ಟಿಕ್ಟಾಕ್...ಡೇವಿಡ್ ವಾರ್ನರ್ಗೆ ಧನ್ಯವಾದ ಹೇಳಿದ ಸ್ಟೈಲಿಷ್ ಸ್ಟಾರ್ - ಬುಟ್ಟ ಬೊಮ್ಮ ಹಾಡಿಗೆ ಡೇವಿಡ್ ವಾರ್ನರ್ ಟಿಕ್ಟಾಕ್
ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ಪತ್ನಿ ಕ್ಯಾಂಡಿಸ್ ಜೊತೆ ಸೇರಿ ಈ ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ. ಈ ವಿಡಿಯೋಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್ 'ತುಂಬಾ ಧನ್ಯವಾದಗಳು ಟಿಕ್ಟಾಕ್ ಬಹಳ ಚೆನ್ನಾಗಿದೆ' ಎಂದು ರಿಪ್ಲೇ ಮಾಡಿದ್ದಾರೆ.

ಸಾಮಾನ್ಯರು ಮಾತ್ರವಲ್ಲ ಸೆಲಬ್ರಿಟಿಗಳು ಕೂಡಾ ಈ ಹಾಡಿಗೆ ಫಿದಾ ಆಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ಪತ್ನಿ ಕ್ಯಾಂಡಿಸ್ ಜೊತೆ ಸೇರಿ ಈ ಹಾಡಿಗೆ ಟಿಕ್ ಟಾಕ್ ಮಾಡಿದ್ದಾರೆ. ಈ ವಿಡಿಯೋವನ್ನು ಡೇವಿಡ್ ವಾರ್ನರ್ ಇಂದು ಬೆಳಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲ್ಲು ಅರ್ಜುನ್ ನಿಜಕ್ಕೂ ಬಹಳ ಸಂತೋಷಗೊಂಡಿದ್ದಾರೆ. ಈ ವಿಡಿಯೋಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಅಲ್ಲು ಅರ್ಜುನ್ 'ತುಂಬಾ ಧನ್ಯವಾದಗಳು ಟಿಕ್ಟಾಕ್ ಬಹಳ ಚೆನ್ನಾಗಿದೆ' ಎಂದು ರಿಪ್ಲೇ ಮಾಡಿದ್ದಾರೆ. ಇದಕ್ಕೆ ಮತ್ತೆ ಡೇವಿಡ್ ವಾರ್ನರ್ ರೀಟ್ವೀಟ್ ಮಾಡಿ 'ಥ್ಯಾಂಕ್ಯೂ ಸರ್ ಹಾಡು ಬಹಳ ಚೆನ್ನಾಗಿದೆ' ಎಂದು ಕಾಂಪ್ಲಿಮೆಂಟ್ಸ್ ನೀಡಿದ್ದಾರೆ.
ಗೀತಾ ಆರ್ಟ್ಸ್ ಬ್ಯಾನರ್ ಅಡಿ ತಯಾರಾದ 'ಅಲಾ ವೈಕುಂಠಪುರಮುಲೋ' ಸಿನಿಮಾ ಜನವರಿ 12 ರಂದು ಬಿಡುಗಡೆಯಾಗಿತ್ತು. ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. 100 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಸಿನಿಮಾ 220 ಕೋಟಿ ರೂಪಾಯಿ ಲಾಭ ಮಾಡಿತ್ತು. ಅಲ್ಲು ಅರ್ಜುನ್ ಜೊತೆ ಪೂಜಾ ಹೆಗ್ಡೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ತಬು, ಜಯರಾಮ್, ಸುಶಾಂತ್, ಮುರಳಿ ಶರ್ಮ, ನವದೀಪ್ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ಧಾರೆ.