ಇಂದು ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅಲ್ಲು ಅರ್ಜುನ್, ತಮ್ಮ ಇನ್ಸ್ಟಾಗ್ರಾಂ ಖಾತೆಯನಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಪುತ್ರಿ ಬರ್ತ್ ಡೇ: ಅಂಜಲಿ ಅಂಜಲಿ ಸಾಂಗ್ ರೀ ಕ್ರಿಯೇಟ್, ರಿಲೀಸ್ - ಅಲ್ಲು ಅರ್ಹಾ ಹುಟ್ಟು ಹಬ್ಬ
ಇಂದು ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದರ ವಿಶೇಷವಾಗಿ ಅಂಜಲಿ ಅಂಜಲಿ ಎಂಬ ಸಾಂಗ್ ರಿಲೀಸ್ ಆಗಿದೆ.

ಒಂದು ಫೋಟೋದಲ್ಲಿ ಗೊಂಬೆ ಗಿಫ್ಟ್ ಮಾಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಕುದುರೆ ಮೇಲೆ ಅರ್ಹಾ ಕೂತಿದ್ದು, ಅಲ್ಲು ಅರ್ಜುನ್ ನಿಂತಿದ್ದಾರೆ. ಇನ್ನು ಬರ್ತ್ ಡೇಗೆ ಶುಭ ಕೋರಿರುವ ನಟ, ಹುಟ್ಟುಹಬ್ಬದ ಶುಭಾಷಯಗಳು. ನೀನು ನನಗೆ ನೀಡಿದ ಸಂತೋಷ, ಮುದ್ದು ಮುದ್ದಾದ ತುಂಟಾಟಗಳಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ. ಇದೇ ಪೋಸ್ಟ್ನಲ್ಲಿ, ನನ್ನ ಮುದ್ದು ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದಿದ್ದಾರೆ.
ಮತ್ತೊಂದು ವಿಶೇಷ ಏನಂದ್ರೆ ಅರ್ಹಾ ಹುಟ್ಟುಹಬ್ಬದ ಪ್ರಯುಕ್ತ ತೆಲುಗಿನ ಅಂಜಲಿ ಅಂಜಲಿ ಎಂಬ ಹಾಡನ್ನು ರೀ ಕ್ರಿಯೇಟ್ ಮಾಡಿ ರಿಲೀಸ್ ಮಾಡಲಾಗಿದೆ. ಇಳಯರಾಜ ಸಂಗೀತ ನೀಡಿರುವ ಈ ಹಾಡಿನಲ್ಲಿ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕಾಣಿಸಿದ್ದಾರೆ. ಈ ಹಾಡು ಈ ಹಿಂದೆ ತೆರೆ ಕಂಡಿದ್ದ ತೆಲುಗು ಸಿನಿಮಾ 'ಅಂಜಲಿ'ಯಲ್ಲಿ ಬಳಸಲಾಗಿದ್ದು, ಅರ್ಹಾ ಹುಟ್ಟುಹಬ್ಬಕ್ಕೆ ರೀ ಕ್ರಿಯೇಟ್ ಮಾಡಲಾಗಿದೆ. ಈ ಹಾಡನ್ನು ಅಲ್ಲು ಅರ್ಜುನ್ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಲಾಗಿದೆ.