ಹೈದರಾಬಾದ್: ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹಾ ರೆಡ್ಡಿ ದಾಂಪತ್ಯಕ್ಕೆ 11ರ ಸಂಭ್ರಮ. ಈ ಖುಷಿಯಲ್ಲಿರುವ ಜೋಡಿ, ವಿವಾಹ ವಾರ್ಷಿಕೋತ್ಸವದ ಕೇಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ಇನ್ಸ್ಟಾಗ್ರಾಮ್ನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಕೇಕ್ ಕತ್ತರಿಸುತ್ತಿರುವ ಫೋಟೋವೊಂದನ್ನ ಹಂಚಿಕೊಂಡಿರುವ 'ಪುಷ್ಪ' ನಟ, 'ಹ್ಯಾಪಿ ಆನಿವರ್ಸರಿ ಕ್ಯೂಟಿ, ಇದು 11 ವರ್ಷಗಳ ದಾಂಪತ್ಯ ಜೀವನ' ಎಂದು ಬರೆದುಕೊಂಡಿದ್ದಾರೆ.