ಪಕ್ಕದ ತೆಲುಗು ಚಿತ್ರ ರಂಗದಲ್ಲಿ ಖ್ಯಾತ ನಿರ್ಮಾಪಕ ಅಲ್ಲುಅರವಿಂದ್ ಅವರು ಕನ್ನಡದಲ್ಲಿ 1998 ರಲ್ಲಿ ‘ಮಾಂಗಲ್ಯಂ ತಂತು ನಾನೇನ’ ಮತ್ತು 2016ರಲ್ಲಿ ತೆರೆಕಂಡ ‘ಸುಂದರಾಂಗ ಜಾಣ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇವರು ಈಗ ಕನ್ನಡದ ಸೂಪರ್ ಹಿಟ್ ಚಿತ್ರ ‘ಆ ಕರಾಳ ರಾತ್ರಿ’ಯನ್ನು ತೆಲುಗಿಗೆ ರೀಮೇಕ್ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ನಿರ್ದೇಶಕ ದಯಾಳ್ ಪದ್ಮನಾಭನ್ ಅವರನ್ನು ಸಂಪರ್ಕಿಸಿದ್ದಾರೆ.
ಅಲ್ಲು ಅರವಿಂದ್ ಅವರು ಇತ್ತೀಚಿಗೆ ‘ಆಹಾ’ ಡಿಜಿಟಲ್ ಸಂಸ್ಥೆ ಒ ಟಿ ಟಿ ಪ್ಲಾಟ್ ಫಾರ್ಮ್ ಸ್ಥಾಪನೆ ಮಾಡಿ ವಿಶ್ವಾದ್ಯಂತ ಸಿನಿಮಾಗಳ ಬಿಡುಗಡೆ ಮಾಡುವ ಯೋಚನೆ ಹೊಂದಿದ್ದಾರೆ. ಜೀ 5 ಸಂಸ್ಥೆಯು ಕನ್ನಡದಲ್ಲಿ ‘ಭಿನ್ನ’ ಚಿತ್ರ ತಯಾರಿಸಿ ಅದನ್ನು ಕಳೆದ ವರ್ಷ ಅಕ್ಟೋಬರ್ 8 ರಂದು ವಿಶ್ವಾದ್ಯಂತ ಪ್ರಿಮಿಯರ್ ಶೋ ಮಾಡಿದ ಹಾಗೆ ಅಲ್ಲು ಅವರ ಆಹಾ ವಾಹಿನಿ ಈ ಸಹ ಈ ಕಾರ್ಯ ಮಾಡಲಿದೆ.