ಚಿತ್ರಮಂದಿರಗಳಿಗೆ ಶೇ.50ರಷ್ಟು ಮಾತ್ರ ಅನುಮತಿ ನೀಡಿದ್ದನ್ನು ಹಿಂತೆಗೆದು ಸಿನಿಮಾ ವೀಷಣೆಗೆ ಶೇ.100ರಷ್ಟು ಅನುಮತಿ ನೀಡಬೇಕು ಎಂದು ನಟ ಡಾಲಿ ಧನಂಜಯ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ಕೊಡಿ : ನಟ ಧನಂಜಯ್ - Allow 100 per cent audience in theaters
ಚಿತ್ರಮಂದಿರಗಳು ಹಾಗೂ ಮಾಲ್ಗಳಲ್ಲಿ ಶೇ.50ರಷ್ಟು ಮಂದಿಗೆ ಅವಕಾಶ ನೀಡುವಂತೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ವಿಷಯ ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ..
ನಟ ಧನಂಜಯ್
ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಚಿತ್ರಮಂದಿರಗಳು ಹಾಗೂ ಮಾಲ್ಗಳಲ್ಲಿ ಶೇ.50ರಷ್ಟು ಮಂದಿಗೆ ಅವಕಾಶ ನೀಡುವಂತೆ, ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಈ ವಿಷಯ ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೇ ವಿಷಯವಾಗಿ ನಟ ಡಾಲಿ ಧನಂಜಯ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅವಕಾಶ ಕೊಡಿ ಎಂದು ಡಾಲಿ ಧನಂಜಯ್ ಮನವಿ ಮಾಡಿಕೊಂಡಿದ್ದಾರೆ.