ರಾಜಮೌಳಿ ಸಾರಥ್ಯದ ಆರ್ಆರ್ಆರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತಿದೆ. ನಿನ್ನೆಯಷ್ಟೇ ಬಾಲಿವುಡ್ ಬೆಡಗಿ ಆಲಿಯಾ ಭಟ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಈ ಬಗ್ಗೆ ನಿರ್ದೇಶಕ ರಾಜಮೌಳಿ, ಆಲಿಯಾ ಜೊತೆ ಇರುವ ಫೋಟೋ ಹಂಚಿಕೊಂಡಿದ್ದು, ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಆಶ್ಚರ್ಯಕರ ಸುದ್ದಿಯೊಂದು ಹೊರ ಬಿದ್ದಿದೆ.
ಇದನ್ನೂ ಓದಿ : ಹೈದರಾಬಾದ್‌ಗೆ ಆಲಿಯಾ ಆಗಮನ: "ಸೀತೆ"ಗೆ ಸ್ವಾಗತ ಕೋರಿದ ಆರ್ಆರ್ಆರ್ ಚಿತ್ರತಂಡ
ಈಗಾಗಲೇ ನಟಿ ಆಲಿಯಾ ಭಟ್ ಆರ್ಆರ್ಆರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಹೈದ್ರಾಬಾದ್‌ಗೆ ತಲುಪಿದ್ದಾರೆ. ಇವರ ಜೊತೆ ಹತ್ತು ಜನ ಸಹಾಯಕರು ಬಂದಿದ್ದಾರೆ. ಈ ಸಹಾಯಕರಿಗೆ ಒಂದು ದಿನಕ್ಕೆ ಚಿತ್ರ ತಂಡ ಬರೋಬ್ಬರಿ ಒಂದು ಲಕ್ಷ ಹಣವನ್ನು ಖರ್ಚು ಮಾಡುತ್ತಿದೆಯಂತೆ.