ಮುಂಬೈ (ಮಹಾರಾಷ್ಟ್ರ):ಕೊರೊನಾ ಟೆಸ್ಟ್ಗೆ ಒಳಗಾಗಿದ್ದ ಬಾಲಿವುಡ್ ನಟಿ ಆಲಿಯಾ ಭಟ್ ವರದಿ ನೆಗೆಟಿವ್ ಬಂದಿದ್ದು, ತಮ್ಮ ವೈದ್ಯರೊಂದಿಗೆ ಚರ್ಚಿಸಿ ಕೆಲಸಕ್ಕೆ ಹಿಂದಿರುಗಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.
ನಾನು ನಿಮ್ಮೆಲ್ಲ ಸಂದೇಶಗಳನ್ನು ಓದುತ್ತಿದ್ದೇನೆ. ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ, ನನ್ನ ವೈದ್ಯರೊಂದಿಗೆ ಮಾತನಾಡಿದ ಬಳಿಕ ಇಂದಿನಿಂದ ಕೆಲಸಕ್ಕೆ ಮರಳಿದ್ದೇನೆ. ಜೊತೆಗೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ. ನೀವು ಸಹ ಜಾಗರೂಕತೆಯಿಂದಿರಿ. ನಿಮ್ಮ ಪ್ರೀತಿ, ಕಾಳಜಿಗೆ ಧನ್ಯವಾದ ಎಂದು ಹೇಳಿದ್ದಾರೆ.