ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ತಾವು ಹೇರ್ ಟ್ರಿಮ್ ಮಾಡಿರುವ ಹೊಸ ಪೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಬಹು ಪ್ರತಿಭಾವಂತ ಪ್ರೀತಿಪಾತ್ರರೊಬ್ಬರು ನನಗೆ ಹೇರ್ ಕಟ್ ಮಾಡಲು ನೆರವಾದರು ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಭಟ್ ಹೊಸ ಹೇರ್ ಸ್ಟೈಲ್... ಹೇರ್ ಕಟ್ ಮಾಡಿದ್ದು ಅವರಂತೆ ಹೌದಾ..? - ಮುಂಬೈ ಆಲಿಯಾ ಭಟ್ ಸುದ್ದಿ
ಆಲಿಯಾ ಮನೆಯಲ್ಲೇ ತಮ್ಮ ಹೇರ್ ಕಟ್ ಮಾಡಿದ್ದು ಹೇರ್ ಟ್ರಿಮ್ ಮಾಡಲು ಸಹಾಯ ಮಾಡಿದ್ದು ನನ್ನ ಪ್ರೀತಿಪಾತ್ರರು ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ನೆಟಿಜನ್ಸ್ ಹೇರ್ ಕಟ್ ಮಾಡಿದ್ದು ರಣಬೀರ್ ಸಿಂಗ್ ಎಂದು ಕಾಲೆಳೆಯುತ್ತಿದ್ದಾರೆ.
ಸೆಲ್ಫಿ ಫೋಟೋವನ್ನು ಹಂಚಿಕೊಂಡಿರುವ ಆಲಿಯಾ, 'ಮನೆಯಲ್ಲೇ ನನ್ನ ಕೂದಲನ್ನು ಕತ್ತರಿಸಿದ್ದೇನೆ. ಈ ವೇಳೆ ನನಗೆ ಹೇರ್ ಕಟ್ ಮಾಡಲು ಸಹಾಯ ಮಾಡಿದ ಬಹು ಪ್ರತಿಭಾವಂತ ಪ್ರೀತಿಪಾತ್ರರಿಗೆ ನನ್ನ ಧನ್ಯವಾದ' ಎಂದು ಕ್ಯಾಪ್ಷನ್ ನೀಡಿದ್ದಾರೆ. ಆಲಿಯಾ ಅವರ ಈ ಪೋಸ್ಟ್ ನೋಡಿ ನೆಟಿಜನ್ಸ್ 'ನಿಮ್ಮ ಹೇರ್ ಟ್ರಿಮ್ ಮಾಡಿದ್ದು ರಣಬೀರ್ ಕಪೂರ್ ' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆ 'ಪ್ರತಿಭಾವಂತ ಪ್ರೀತಿಪಾತ್ರರು ರಣಬೀರ್ ಅವರೇನಾ..?' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, 'ನಿಮ್ಮ ಪ್ರೀತಿಪಾತ್ರರ ಬಗ್ಗೆ ನಾವು ಮತ್ತಷ್ಟು ತಿಳಿದುಕೊಳ್ಳಲು ಬಯಸುತ್ತೇವೆ' ಎಂದಿದ್ದಾರೆ.
ಹೇರ್ ಕಟ್ ಬಗ್ಗೆ ಮಾತ್ರವಲ್ಲದೆ ಫಿಟ್ನೆಸ್ ಬಗ್ಗೆ ಬರೆದುಕೊಂಡಿರುವ ಆಲಿಯಾ, ಈ ಲಾಕ್ಡೌನ್ ದಿನಗಳಲ್ಲಿ ಸರಿಯಾದ ಸಮಯಕ್ಕೆ ತಿಂಡಿ ತಿಂದು, ವರ್ಕೌಟ್ ಮಾಡುತ್ತಾ ಮೊದಲಿಗಿಂತ ಬಹಳ ಸ್ಟ್ರಾಂಗ್ ಹಾಗೂ ಫಿಟ್ ಆಗಿದ್ದಾರಂತೆ. ಆಲಿಯಾ ಕರಿಯರ್ ವಿಚಾರಕ್ಕೆ ಬರುವುದಾದರೆ ರಣಬೀರ್ ಕಪೂರ್ ಜೊತೆ ಅವರು 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲಾಕ್ಡೌನ್ ನಂತರ ಶೂಟಿಂಗ್ ಮುಂದುವರೆಯಲಿದೆ.