ಮುಂಬೈ:ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮನ್ನು ಸದಸ್ಯರಾಗಲು ಆಹ್ವಾನಿಸಿದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ಸಂದೇಶದಲ್ಲಿ ಸಾಮಾಜಿಕ ಮಾಧ್ಯಮವು ಜನರನ್ನು ವಿಭಜಿಸುತ್ತದೆ ಎಂದಿದ್ದಾರೆ. ಅಕಾಡೆಮಿಯ ಸದಸ್ಯರಾಗಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ಗೆ ಧನ್ಯವಾದ ಹೇಳುತ್ತೇನೆ ಎಂದಿರುವ ಅವರು, ಈ ಬಗ್ಗೆ ನನಗೆ ಗೌರವವಿದೆ ಎಂದಿದ್ದಾರೆ.
ಭಾರತೀಯ ಚಿತ್ರರಂಗವು ವಿಶ್ವ ವೇದಿಕೆಯಲ್ಲಿ ಬಹಳ ಉನ್ನತ ವೇದಿಕೆಯನ್ನು ಕಂಡುಕೊಳ್ಳುತ್ತಿರುವುದನ್ನು ನೋಡುವುದರಲ್ಲಿ ಆಳವಾದ ತೃಪ್ತಿಯಿದೆ. ಅಲ್ಲದೇ ಪ್ರತಿವರ್ಷ ಭಾರತದಿಂದ ಹೆಚ್ಚಿನ ನಟರು, ಚಲನಚಿತ್ರ ನಿರ್ಮಾಪಕರು ಮತ್ತು ತಂತ್ರಜ್ಞರನ್ನು ಅಕಾಡೆಮಿ ಗುರುತಿಸುತ್ತಿದೆ ಎಂದಿರುವ ಅವರು, ಭಾರತೀಯ ಸಿನೆಮಾ ಪ್ರಪಂಚದಾದ್ಯಂತ ಜನರ ಹೃದಯಗಳನ್ನು ತಲುಪುತ್ತಲೇ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.