ಹೈದರಾಬಾದ್ :ಬಾಲಿವುಡ್ ನಟಿ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಠಿಯಾವಾಡಿ ಚಿತ್ರದ ಟ್ರೈಲರ್ ಇಂದು ರಿಲೀಸ್ ಆಗಿದೆ. ಗಂಗೂಬಾಯಿ ಪಾತ್ರದಲ್ಲಿ ನಟಿ ಮಿಂಚು ಹರಿಸಿದ್ದು, ಅತಿಥಿ ಪಾತ್ರದಲ್ಲಿ ನಟ ಅಜಯ್ ದೇವಗನ್ ಕಾಣಿಸಿದ್ದಾರೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಸಖತ್ ಇಂಪ್ರೆಸ್ ಮಾಡಿದ್ದಾರೆ.
‘ಗಂಗೂಬಾಯಿ ಕಾಠಿಯಾವಾಡಿ’ದಲ್ಲಿ ಆಲಿಯಾ ಕೋವಿಡ್ ಕಾರಣದಿಂದಾಗಿ ಮೇಲಿಂದ ಮೇಲೆ ರಿಲೀಸ್ ದಿನಾಂಕ ಮೂಂದೂಡಿಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಫೆಬ್ರವರಿ 25ರಂದು ತೆರೆಗೆ ಅಪ್ಪಳಸಲಿದ್ದು, ಚಿತ್ರತಂಡ ಇಂದು ಟ್ರೈಲರ್ ರಿಲೀಸ್ ಮಾಡಿದೆ.
ಆಲಿಯಾ ಭಟ್ 'ಗಂಗೂಬಾಯಿ ಕಾಠಿಯಾವಾಡಿ' ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಠಿಯಾವಾಡಿ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಕಾಮಾಟಿಪುರದ ಡಾನ್ ಆಗಿ ಆಲಿಯಾ ಭಟ್ ಮಿಂಚು ಹರಿಸಿದ್ದಾರೆ.
‘ಗಂಗೂಬಾಯಿ ಕಾಠಿಯಾವಾಡಿ’ದಲ್ಲಿ ಆಲಿಯಾ ಟ್ರೈಲರ್ನಲ್ಲಿ ಆಲಿಯಾ ಭಟ್ ವೇಶ್ಯೆಯಾಗಿ ಮಿಂಚು ಹರಿಸಿದ್ದು, ಪ್ರಮುಖ 10 ದೃಶ್ಯ ಅಲ್ಲಿನ ನೈಜ್ಯತೆ ಬಗ್ಗೆ ಬೆಳಕು ಚೆಲ್ಲುತ್ತವೆ. 16ನೇ ವಯಸ್ಸಿನಲ್ಲೇ ಮುಂಬೈಗೆ ಬರುವ ಗಂಗೂಬಾಯಿ ಅಲ್ಲಿನ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಡ್ತಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಇದನ್ನೂ ಓದಿರಿ:ಪೋರ್ನ್ ವಿಡಿಯೋ ದಂಧೆ : ಬಂಧನದಿಂದ ನಟಿ ಶೆರ್ಲಿನ್ ಚೋಪ್ರಾಗೆ ಸುಪ್ರೀಂಕೋರ್ಟ್ ರಕ್ಷಣೆ
ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕೆಲಸ ಮಾಡುವ ಗಂಗೂಬಾಯಿ ತದ ನಂತರ ಅಲ್ಲಿನ ಪ್ರಮುಖ ಮಹಿಳೆಯಾಗಿ ಗುರುತಿಸಿಕೊಳ್ಳುತ್ತಾಳೆ. ಗಂಗೂಬಾಯಿಯನ್ನ ಹಣಕ್ಕಾಗಿ ಮಾರಾಟ ಮಾಡಿರುವ ವಿಷಯ ಆಕೆಗೆ ಗೊತ್ತಾಗುತ್ತಿದ್ದಂತೆ ಬಲವಾಗಿ ವಿರೋಧ ಮಾಡುತ್ತಾಳೆ. ಇದೆಲ್ಲವೂ ಟ್ರೈಲರ್ನಲ್ಲಿ ಅದ್ಧೂರಿಯಾಗಿ ಮೂಡಿ ಬಂದಿದೆ.