ಹೈದರಾಬಾದ್:ದಕ್ಷಿಣ ಭಾರತದ ಮೆಗಾ ಬಜೆಟ್ ಚಿತ್ರ ಆರ್ಆರ್ಆರ್ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಘಟಾನುಘಟಿ ನಟ-ನಟಿಯರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್‌ನ ಜನಪ್ರಿಯ ಕಲಾವಿದರಾದ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಕೂಡ ಚಿತ್ರದಲ್ಲಿದ್ದು, ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಕೇವಲ 15 ನಿಮಿಷದ ನಟನೆಗೋಸ್ಕರ ಆಲಿಯಾ ಭಟ್ 9 ಕೋಟಿ ರೂ. ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ. ಈ ಚಿತ್ರದಲ್ಲಿ ಆಲಿಯಾ 'ಸೀತಾ' ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಆರ್ಆರ್ಆರ್ ಚಿತ್ರದಲ್ಲಿ ಅಜಯ್ ದೇವಗನ್, ಆಲಿಯಾ ಭಟ್ ಜನವರಿ 7ರಂದು ತೆರೆ ಕಾಣಬೇಕಾಗಿದ್ದ ಚಿತ್ರ ಕೋವಿಡ್ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವ ಕಾರಣ ಪ್ರಮುಖ ನಟ ಅಜಯ್ ದೇವಗನ್ ಕೂಡಾ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿರುವ ದೇವಗನ್ 35 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಸಿನಿ ಪ್ರಿಯರಿಗೆ ಮತ್ತೊಮ್ಮೆ ನಿರಾಸೆ.. 'RRR' ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ
ಈ ಚಿತ್ರದಲ್ಲಿ ಹೀರೋಗಳಾಗಿ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ನಟಿಸಿದ್ದಾರೆ. ತೆಲುಗಿನಲ್ಲಿ ನಿರ್ಮಾಣವಾಗಿರುವ ಚಿತ್ರ ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಿ ತೆರೆ ಕಾಣಲಿದೆ.