ಬಿಟೌನ್ನಲ್ಲಿ ಹಲ್ಚಲ್ ಸುದ್ದಿಗಳಿಗೆ ಬರವೇ ಇಲ್ಲ. ಅದರಲ್ಲೂ ಯಾವುದಾದರೂ ಚಿಟ್ ಚಾಟ್ ಶೋನಲ್ಲಿ ನಡೆದ ತಮಾಷೆ ಮಾತುಕತೆಗಳೇ ಬಿಸಿ ಬಿಸಿ ಸುದ್ದಿಯಾಗಿ ಸೇಲ್ ಆಗುತ್ತವೆ. ಇದೀಗ ಬಾಲಿವುಡ್ಗೆ ನ್ಯೂ ಎಂಟ್ರಿಯಾಗಿರುವ ಅಲಯಾ ಎಫ್ ಮಾತು ಕೂಡ ಸಖತ್ ಸುದ್ದಿಯಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಲವ್ ಆಜ್ ಕಲ್ ಟ್ರೈಲರ್ ಬಗ್ಗೆ ಜೂಮ್ ಕಾರ್ಯಕ್ರಮದಲ್ಲಿ ಮಾತುಕತೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಲಯಾ ಭಾಗಿಯಾಗಿದ್ದು, ಕಾರ್ತಿಕ್ ಆರ್ಯನ್ ಬಗ್ಗೆ ಓಪನ್ ಅಪ್ ಆಗಿ ಮಾತನಾಡಿದ್ದಾರೆ. ಸದ್ಯ ಹಿಂದಿ ಸಿನಿ ಇಂಡಸ್ಟ್ರಿಯಲ್ಲಿ ಕ್ರಶ್ಶಿಂಬ್ ಬಾಯ್ ಆಗಿ ಮಿಂಚುತ್ತಿರುವ ಕಾರ್ತಿಕ್ ಆರ್ಯನ್ ಬಗ್ಗೆ ಈ ಚಾಟ್ ಶೋನಲ್ಲಿ ಮಾತುಕತೆ ನಡೆಸಲಾಯಿತು. ಕಾರ್ತಿಕ್ ಬಗ್ಗೆ ನಿಮ್ಮ ಮನದಾಳದ ಮಾತನ್ನು ಹೇಳಿ ಅಂತ ಅಲಯಾರನ್ನ ಕೇಳಿದಾಗ, ನನಗೆ ಅವರ ಜೊತೆ ರೊಮ್ಯಾನ್ಸ್ ಸೀನ್ನಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ ಎನ್ನುವ ಮೂಲಕ ತಮ್ಮ ಮನದಾಳವನ್ನ ಹಂಚಿಕೊಂಡರು.
ನೀವು ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ನಿಮ್ಮ ಹಾಸಿಗೆಯಲ್ಲಿ ಕಾರ್ತಿಕ್ ಆರ್ಯನ್ ಇದ್ದರೆ ನಿಮಗೆ ಯಾವ ರೀತಿಯ ಫೀಲ್ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಲಯಾ, ಅರೇ..ಅದ್ರಲ್ಲೇನಿದೆ..ಇದು ನನಗೆ ಸಪ್ರೈಸ್ ಏನೂ ಅಲ್ಲ ಅಂತ ಬೋಲ್ಡ್ ಆಗಿಯೇ ಉತ್ತರಿಸಿ, ದಂಗು ಬಡಿಸಿದರು.
ಈ ಹಿಂದೆ ಸಾರಾ ಅಲಿಖಾನ್ ಮತ್ತು ಅನನ್ಯ ಪಾಂಡೆಗೆ ಕಾರ್ತಿಕ್ ಮೇಲೆ ಕ್ರಶ್ ಆಗಿತ್ತು ಎಂಬ ಸುದ್ದಿಗಳು ಹರಿದಾಡುತ್ತಿದ್ವು. ಇದೀಗ ಕಾರ್ತಿಕ್ ಮೇಲೆ ಕ್ರಶ್ ಆಗಿರುವವರ ಪಟ್ಟಿಯಲ್ಲಿ ಅಲಯಾ ಕೂಡ ಸೇರ್ಪಡೆಯಾಗಿದ್ದಾರೆ.
ಲವ್ ಆಜ್ ಕಲ್ ಟ್ರೇಲರ್ ಬಗ್ಗೆ ಮಾತನಾಡಿದ ಅಲಯಾ ಎಫ್, ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಕಾರ್ತಿಕ್ ಮತ್ತು ಸಾರಾ ಅಲಿಖಾನ್ ನಡುವಿನ ಕೆಮಿಸ್ಟ್ರಿ ಸಖತ್ತಾಗಿದೆ . ಇದನ್ನು ನೋಡಿದ ಮೇಲೆ ನಾನೂ ಕೂಡ ಕಾರ್ತಿಕ್ ಜೊತೆ ರೊಮ್ಯಾನ್ಸ್ ಮಾಡಬೇಕು ಎಂಬ ಆಸೆಯಾಗಿದೆ ಎಂದು ತಮ್ಮ ಮನದಾಳವ ಬಿಚ್ಚಿಟ್ಟಿದ್ದಾರೆ.
ಶೋನಲ್ಲಿ ಅಲಯಾಗೆ ಕೆಲವೊಂದು ತುಂಟ ಪ್ರಶ್ನೆಗಳನ್ನು ಕೇಳಲಾಗಿದ್ದು, ಬಾಲಿವುಡ್ ಸ್ಟಾರ್ಗಳಲ್ಲಿ ನಿಮಗೆ ಯಾರ ಜೊತೆ ರೊಮ್ಯಾನ್ಸ್ ಮಾಡಬೇಕು, ಯಾರನ್ನು ಮದುವೆಯಾಗಬೇಕು, ಯಾರನ್ನು ಕೊಲ್ಲಬೇಕು ಅಂತ ಅನಿಸುತ್ತಿದೆ ಎಂಬ ಪ್ರಶ್ನೆಯನ್ನು ಅಲಯಾ ಮುಂದೆ ಇಡಲಾಯಿತು. ಇದಕ್ಕೆ ಬೋಲ್ಡಾಗಿಯೇ ಉತ್ತರಿಸಿದ ನಟಿ, ನಾನು ವರುಣ್ ಧವನ್ನನ್ನು ಮದುವೆಯಾಗಬೇಕು, ಕಾರ್ತಿಕ್ ಜೊತೆ ರೊಮ್ಯಾನ್ಸ್ ಮಾಡಬೇಕು ಮತ್ತು ಇಶಾಂತ್ ಕಟ್ಟರ್ನನ್ನು ಕೊಲ್ಲಬೇಕು ಎಂದು ಉತ್ತರಿಸಿದ್ದಾರೆ.
ಅಲಯಾ ಎಫ್ ಬಾಲಿವುಡ್ನಟಿ ಪೂಜಾ ಬೇಡಿಯ ಮಗಳಾಗಿದ್ದು, 'ಜವಾನಿ ಜಾನೇ ಮನ್' ಸಿನಿಮಾದಲ್ಲಿ ಸೈಫ್ ಅಲಿಖಾನ್ ಮತ್ತು ಟಬು ಜೊತೆ ಅಭಿನಯಿಸಿದ್ದಾರೆ.