ಕರ್ನಾಟಕ

karnataka

ETV Bharat / sitara

ಕಾವೇರಿ ಅಭಿಯಾನಕ್ಕೆ ಬೈಕ್ ರ್‍ಯಾಲಿ ಮೂಲಕ ಬೆಂಬಲ ನೀಡಿದ ಅಕುಲ್ ಬಾಲಾಜಿ - ತ್ರಿಪುರವಾಸಿನಿ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು 'ಕಾವೇರಿ ಕೂಗು' ಅಭಿಯಾನಕ್ಕೆ ಚಾಲನೆ ದೊರೆತಿದ್ದು, ನಟ, ನಿರೂಪಕ ಅಕುಲ್ ಬಾಲಾಜಿ ಕೂಡಾ ಈ ಅಭಿಯಾನಕ್ಕೆ ಬೆಂಬಲಿಸಿದ್ದಾರೆ. ಈ ಜಾಥಾಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅಕುಲ್ ಬಾಲಾಜಿ

By

Published : Sep 8, 2019, 4:20 PM IST

ಕಾವೇರಿ ಉಳಿಸುವ ನಿಟ್ಟಿನಲ್ಲಿ ಆರಂಭವಾಗಿರುವ 'ಕಾವೇರಿ ಕೂಗು' ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸಾಮಾನ್ಯರು ಸೇರಿದಂತೆ ಚಲನಚಿತ್ರ ನಟ-ನಟಿಯರು ಕೂಡಾ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

ಬೈಕ್ ಜಾಥಾದಲ್ಲಿ ಭಾಗವಹಿಸಿದ ಅಕುಲ್ ಬಾಲಾಜಿ

ನಟ, ನಿರೂಪಕ ಅಕುಲ್ ಬಾಲಾಜಿ ಕೂಡಾ ಬೈಕ್ ರ್‍ಯಾಲಿ ಮೂಲಕ ಈ ಅಭಿಯಾನಕ್ಕೆ ಬೆಂಬಲಿಸಿದ್ದಾರೆ. ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಮುಂದೆ ಬೈಕ್​ ಜಾಥಾಗೆ ಚಾಲನೆ ದೊರೆಯಿತು. ಈ ಬೈಕ್ ಜಾಥಾ ಕಸ್ತೂರಬಾ ರಸ್ತೆ, ರಾಜಭವನ, ಮೇಕ್ರಿ ಸರ್ಕಲ್ ಸೇರಿದಂತೆ ನಗರದ ವಿವಿಧ ರಸ್ತೆಗಳಲ್ಲಿ ಸಾಗಿ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಕೊನೆಗೊಂಡಿತು. ಅಕುಲ್ ಬಾಲಾಜಿ ತಮ್ಮ ಬಿಳಿ ಬಣ್ಣದ ಹಯಾಬುಸಾ ಬೈಕ್​​​​​ನಲ್ಲಿ ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಕುಲ್, ಇಶಾ ಫೌಂಡೇಶನ್ ಸಂಸ್ಥೆ ಒಂದು ಅದ್ಭುತವಾದ ಪರಿಕಲ್ಪನೆಯಿಂದ ಈ ಅಭಿಯಾನವನ್ನು ಆರಂಭಿಸಿದೆ. ಕಾವೇರಿಯನ್ನು ಈಗ ಉಳಿಸಿಕೊಳ್ಳಲು ಆಗಿಲ್ಲ ಎಂದರೆ ಮುಂದಿನ ಪೀಳಿಗೆಗೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ಈ ಅಭಿಯಾನದ ಮೂಲಕ ಜನರಿಗೆ ಜಾಗೃತಿ ಮೂಡಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ.

ABOUT THE AUTHOR

...view details