90ರ ದಶಕದಲ್ಲಿ ತಮ್ಮ ಹ್ಯಾಂಡ್ಸಮ್ ಲುಕ್ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ನಟ ಸುಪ್ರೀಮ್ ಹೀರೋ ಶಶಿಕುಮಾರ್ ಈಗ ಚಿತ್ರರಂಗಕ್ಕಿಂತ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಶಶಿಕುಮಾರ್ ಪುತ್ರ ಕೂಡಾ ಚಿತ್ರರಂಗಕ್ಕೆ ಬಂದಿರುವುದು ತಿಳಿದ ವಿಚಾರ. ಅಕ್ಷಿತ್ ಕುಮಾರ್ ಮೊದಲ ಚಿತ್ರ 'ಸೀತಾಯಣ 'ದ ಮೋಷನ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
ಅಕ್ಷಿತ್ ಶಶಿಕುಮಾರ್ ಮೊದಲ ಚಿತ್ರ 'ಸೀತಾಯಣ' ಮೋಷನ್ ಪೋಸ್ಟರ್ ಬಿಡುಗಡೆ - Akshit shashikumar first movie
ಅಕ್ಷಿತ್ ಶಶಿಕುಮಾರ್ ನಟನೆಯ 'ಸೀತಾಯಣ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಇದೇ ತಿಂಗಳ 11 ರಂದು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಕೆಲವೇ ದಿನಗಳಲ್ಲಿ 'ಸೀತಾಯಣ' ಟೀಸರ್ ಬಿಡುಗಡೆಯಾಗಲಿದೆ. ನವೆಂಬರ್ 11 ರಂದು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. 'ಸೀತಾಯಣ' ಚಿತ್ರವನ್ನು ಲಲಿತಾ ರಾಜಲಕ್ಷ್ಮಿ ನಿರ್ಮಿಸಿದ್ದು, ಪ್ರಭಾಕರ್ ಆರಿಪಾಕ ನಿರ್ದೇಶಿಸಿದ್ದಾರೆ. ಅಕ್ಷಿತ್ ಶಶಿಕುಮಾರ್ಗೆ ನಾಯಕಿಯಾಗಿ ಅನಹಿತ ಭೂಷಣ್ ನಟಿಸಿದ್ದಾರೆ. ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಮೋಷನ್ ಪೋಸ್ಟರ್ ನೋಡಿ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು ಸಿನಿಮಾ ನೋಡಲು ಕಾಯುತ್ತಿದ್ದಾರೆ.