ಕರ್ನಾಟಕ

karnataka

ETV Bharat / sitara

ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ರಿಲೀಸ್​ ಡೇಟ್​ ರಿವೀಲ್ - ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಸಿನಿಮಾ ಬಿಡುಗಡೆ ದಿನಾಂಕ

ನಿರ್ಮಾಪಕ ಸಾಜಿದ್ ನಡಿಯಾದ್​ವಾಲಾ, ತಮ್ಮ ಬಚ್ಚನ್ ಪಾಂಡೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Bachchan Pandey
ಬಚ್ಚನ್ ಪಾಂಡೆ

By

Published : Jan 23, 2021, 4:29 PM IST

ಮುಂಬೈ:2022 ರ ಜನವರಿ 26 ರಂದು ಬಹು ನಿರೀಕ್ಷಿತ "ಬಚ್ಚನ್ ಪಾಂಡೆ" ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಬಾಲಿವುಡ್​ ನಟ ಅಕ್ಷಯ್ ಕುಮಾರ್ ಪ್ರಕಟಿಸಿದ್ದಾರೆ.

ನಿರ್ಮಾಪಕ ಸಾಜಿದ್ ನಡಿಯಾದ್​ವಾಲಾ, ಚಿತ್ರದ ಬಿಡುಗಡೆಯ ದಿನಾಂಕವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಅವರ ಒಂದು ನೋಟ ಸಾಕು.! ಬಚ್ಚನ್ ಪಾಂಡೆ 2022 ರ ಜನವರಿ 26 ರಂದು ಬಿಡುಗಡೆಯಾಗುತ್ತಿದೆ." ಎಂದು ನಿರ್ಮಾಪಕ ಸಾಜಿದ್ ನಡಿಯಾದ್​ವಾಲಾ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಅಕ್ಷಯ್​ ಕುಮಾರ್​ ಸಹ ಟ್ವೀಟ್​ ಮಾಡಿದ್ದು, ಚಿತ್ರದ ರಿಲೀಸ್​ ಡೇಟ್​ನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ನಟ ವರುಣ್​ ಧವನ್​​​ ಮದುವೆ : ಆಲಿಬಾಗ್​​ಗೆ ಆಗಮಿಸಿದ ಮದುಮಗ

ನಿರ್ದೇಶಕ ಫರ್ಹಾದ್ ಸಾಮ್ಜಿ ಈ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ತಾರಾಗಣದಲ್ಲಿ ನಟರಾದ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್, ಅರ್ಷದ್ ವಾರ್ಸಿ ಮತ್ತು ಪಂಕಜ್ ತ್ರಿಪಾಠಿ ಇದ್ದಾರೆ. ಚಿತ್ರದ ಚಿತ್ರೀಕರಣವನ್ನು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆಸಲಾಗುತ್ತಿದೆ.

ನಟ ಅಕ್ಷಯ್ ಕುಮಾರ್ ತಾವು ನಟಿಸುತ್ತಿರುವ ರೋಹಿತ್ ಶೆಟ್ಟಿ ನಿರ್ದೇಶನದ ಚಿತ್ರ "ಸೂರ್ಯವಂಶಿ" ಬಿಡುಗಡೆ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details