ಇದೀಗ ದೇಶದೆಲ್ಲೆಡೆ ರೈತ ಪ್ರತಿಭಟನೆ ಪರ ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ನಿನ್ನೆ ರಿಹಾನ್ನ ಮಾಡಿದ ಟ್ವೀಟ್ ಬಗ್ಗೆ ಬಾಲಿವುಡ್ ಬುಗಿಲೆದ್ದಿದೆ. ಟ್ವೀಟ್ನಲ್ಲಿ ರಿಹಾನ್ನಾ, ನಾವು ಯಾಕೆ ಭಾರತದ ರೈತ ಪ್ರತಿಭಟನೆ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದರು.
ಇದಕ್ಕೆ ಸಿಟ್ಟಿಗೆದ್ದ ವಿದೇಶಾಂಗ ಸಚಿವಾಲಯ 'ರೈತ ಪ್ರತಿಭಟನೆ ನಮ್ಮ ದೇಶದ ಆಂತರಿಕ ವಿಷಯ, ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ, ಹೊರಗಿನವರು ಇದರ ಬಗ್ಗೆ ಮಾತನಾಡಬಾರದು' ಎಂಬ ಪ್ರಕಟಣೆ ಹೊರೆಡಿಸಿತ್ತು. ಇದಾದ ಮೇಲೆ ಬಾಲಿವುಡ್ನ ಹಲವು ತಾರೆಯರು ಮತ್ತು ಕೆಲವು ಕ್ರಿಕೆಟಿಗರು #IndiaTogether #IndiaAgainstPropaganda ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.
ಇದೇ ವಿಚಾರವಾಗಿ ನಟ ಅಕ್ಷಯ್ ಕುಮಾರ್ಕೂಡ ಟ್ವೀಟ್ ಮಾಡಿದ್ದ ನಮ್ಮ ದೇಶದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಹೊರಗಿನವರು ತಲೆಹಾಕುವುದು ಬೇಡ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ಷಯ್ ಕುಮಾರ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.
' ಗಾಯಕಿ ರಿಹಾನ್ನ ವಿದೇಶಿ ಮಹಿಳೆಯಾಗಿದ್ದು ಆಕೆಗೆ ಭಾರತದ ಆಂತರಿಕ ವಿಷಯದ ಬಗ್ಗೆ ಮಾತನಾಡುವ ಅಧಿಕಾರ ಇಲ್ಲವಾದರೆ, ಅಕ್ಷಯ್ ಕುಮಾರ್ ಕೂಡ ಭಾರತೀಯರಲ್ಲ. ಹಾಗಿರುವಾಗ ಅಕ್ಷಯ್ ಗೆ ಅಧಿಕಾರ ಏನಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಈಗಲೂ ಭಾರದ ಪೌರತ್ವ ಹೊಂದಿಲ್ಲ. ಕೆನಡಾ ದೇಶದ ಪೌರತ್ವವನ್ನು ಹೊಂದಿದ್ದಾರೆ. ಅಲ್ಲದೆ ಒಂದು ಭಾಷಣದಲ್ಲಿ ನನ್ನ ಕೊನೆಯ ದಿನಗಳನ್ನು ಕೆನಡಾದಲ್ಲೇ ಕಳೆಯಲು ಇಚ್ಚಿಸುತ್ತೇನೆ ಎಂದಿದ್ದರು.