ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್ ಸಿನಿಮಾದ ಟೈಟಲ್ ಇದೀಗ ಬದಲಾಗಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿಯನ್ನು ಹೊರ ಹಾಕಿದ್ದು, ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯಾಗಬಾರದೆಂದು ಲಕ್ಷ್ಮಿ ಬಾಂಬ್ ಬದಲಿಗೆ ಲಕ್ಷ್ಮಿ ಎಂದು ಬದಲಾಯಿಸಲಾಗಿದೆ.
ರಾಘವ್ ಲಾರೆನ್ಸ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕಿಯಾರ ಅಡ್ವಾಣಿ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಅಕ್ಷಯ್ ಕುಮಾರ್ ಆಸಿಫ್ ಮತ್ತು ಮಂಗಳ ಮುಖಿ ಪಾತ್ರವಾದ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಿನಿಮಾ ಟೈಟಲ್ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಾಘವ್ ಲಾರೆನ್ಸ್, ಲಕ್ಷ್ಮಿ ಬಾಂಬ್ ಟೈಟಲ್ ಆ ಸಿನಿಮಾಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತೆ ಎಂಬ ಕಾರಣಕ್ಕೆ ನಾಮಕರಣ ಮಾಡಿದ್ದೆವು. ಇದು ರಿಮೇಕ್ ಸಿನಿಮಾ ಆಗಿರುವುದರಿಂದ ಆ ಹೆಸರು ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅಂದುಕೊಂಡಿದ್ದೆ.
ಇನ್ನು ಮಂಗಳ ಮುಖಿಯರು ಶಕ್ತಿಯುತವಾಗಿರುತ್ತಾರೆ. ಮತ್ತು ಆ ಪಾತ್ರ ಕೂಡ ಪವರ್ಫುಲ್ ಆಗಿದೆ. ಈ ಎಲ್ಲವನ್ನು ಗಮನಿಸಿ ಲಕ್ಷ್ಮಿ ಬಾಂಬ್ ಎಂದು ಟೈಟಲ್ ಇಡಲಾಗಿತ್ತು ಎಂದಿದ್ದಾರೆ.
ಕನ್ನಡದಲ್ಲಿಯೂ ಇದೇ ರೀತಿಯಾದ ಸಿನಿಮಾ ಈಗಾಗಲೇ ತೆರೆ ಕಂಡಿದೆ. ಉಪೇಂದ್ರ ಅಭಿನಯದ ಕಾಂಚನಾ ಸಿನಿಮಾ ಇದಾಗಿದ್ದು, ಇದೀಗ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ.