ಕರ್ನಾಟಕ

karnataka

ETV Bharat / sitara

ನಾನು ಕೆಲಸ ಮಾಡುತ್ತಿರೋದು ಹಣಕ್ಕಾಗಿ ಅಲ್ಲ, ಆಸಕ್ತಿಗಾಗಿ: ಅಕ್ಷಯ್ ಕುಮಾರ್ - ಜಿಗರ್​ಥಂಡ

ನಾನೀಗ ಹಣಕ್ಕಾಗಿ ಸಿನಿಮಾ ಮಾಡುತ್ತಿಲ್ಲ, ಆಸಕ್ತಿಯ ಕಾರಣದಿಂದ ಸಿನಿಮಾ ಮಾಡುತ್ತಿದ್ದೇನೆ. ನನಗೆ ಯಾವಾಗ ಆಸಕ್ತಿ ಹೊರಟುಹೋಗುತ್ತದೋ ಆಗ ಕೆಲಸ ನಿಲ್ಲಿಸುತ್ತೇನೆ ಎಂದು ಬಾಲಿವುಡ್​ ನಟ ಅಕ್ಷಯ್ ಹೇಳಿದ್ದಾರೆ.

ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್

By

Published : Mar 11, 2022, 9:04 AM IST

ಮುಂಬೈ: ಬಾಲಿವುಡ್ ಸೂಪರ್‌ ಸ್ಟಾರ್ ಅಕ್ಷಯ್ ಕುಮಾರ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲೊಬ್ಬರು. ಅವರ ಮುಂದಿನ‌ ಚಿತ್ರ ‘ಬಚ್ಚನ್ ಪಾಂಡೆ’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ, ತಮ್ಮ ಸಿನಿಮಾ ಕೆಲಸಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಕೆಲಸ ಮಾಡಿದ್ದಾರೆ.‌ ಕಾರಣ, ಎಲ್ಲರಿಗೂ ಹಣದ ಅವಶ್ಯಕತೆ ಇದೆ. ನನಗೆ ಜೀವನದಲ್ಲಿ‌ ಎಲ್ಲವೂ ಇದೆ. ಒಳ್ಳೆಯ ಬದುಕನ್ನು‌ ನಡೆಸುತ್ತಿದ್ದೇನೆ. ಆರಾಮವಾಗಿ‌ ಮನೆಯಲ್ಲಿ ಕುಳಿತು ದಿನಗಳನ್ನು ಕಳೆಯಬಹುದು. ಆದರೆ, ಹಾಗೆ ಮಾಡಿದರೆ ಕೆಲಸ ಮಾಡಬೇಕು, ಹಣ ಗಳಿಸಬೇಕು ಎಂದು ಅಂದುಕೊಂಡವರ ಕತೆ ಏನು?. ನಾನೀಗ ಹಣಕ್ಕಾಗಿ ಸಿನಿಮಾ ಮಾಡುತ್ತಿಲ್ಲ, ಆಸಕ್ತಿಯ ಕಾರಣದಿಂದ ಸಿನಿಮಾ ಮಾಡುತ್ತಿದ್ದೇನೆ. ನನಗೆ ಯಾವಾಗ ಆಸಕ್ತಿ ಹೊರಟುಹೋಗುತ್ತದೋ ಆಗ ಕೆಲಸ ನಿಲ್ಲಿಸುತ್ತೇನೆ ಎಂದು ಅಕ್ಷಯ್ ಹೇಳಿದರು‌.

‘ಬಚ್ಚನ್ ಪಾಂಡೆ’ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್​

ಮಾರ್ಚ್ 18ರಂದು ‘ಬಚ್ಚನ್ ಪಾಂಡೆ’ ಬಿಡುಗಡೆಯಾಗಲಿದೆ. 'ಜಿಗರ್​ಥಂಡ' ಚಿತ್ರದ ರಿಮೇಕ್ ‘ಬಚ್ಚನ್ ಪಾಂಡೆ’ ಎನ್ನಲಾಗಿದೆ. ಚಿತ್ರವನ್ನು ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಕೃತಿ ಸನೋನ್‌ ಮೊದಲಾದ ತಾರೆಯರು ‘ಬಚ್ಚನ್ ಪಾಂಡೆ’ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ:ರಷ್ಯಾ - ಉಕ್ರೇನ್​​ ಯುದ್ಧ: ತಾತ್ಕಾಲಿಕವಾಗಿ ನಿಯಮ ಸಡಿಲಗೊಳಿಸಿದ ಫೇಸ್​​ಬುಕ್

ABOUT THE AUTHOR

...view details