ಹೈದರಾಬಾದ್ : ಕಳೆದ ಎರಡು ವಾರಗಳ ನಂತರವೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಜಯಭೇರಿ ಬಾರಿಸುತ್ತಿದೆ. ಕೇವಲ 15 ಕೋಟಿ ಬಜೆಟ್‌ನ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದೆ. ಚಿತ್ರದ ಗಳಿಕೆ ನಿರಂತರವಾಗಿ ಹೆಚ್ಚುತ್ತಿದೆ.
ನಟ ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರ ಮಾ.18ರಂದು ಬಿಡುಗಡೆಯಾಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಕಾಶ್ಮೀರ ಫೈಲ್ಸ್‌ಗೆ ಶರಣಾಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಶ್ಲಾಘಿಸಿದ್ದಾರೆ ಮತ್ತು ಅವರು ದೊಡ್ಡ ನಷ್ಟವನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:'ಬಚ್ಚನ್ ಪಾಂಡೆ’ ಟ್ರೈಲರ್ ರಿಲೀಸ್: ಗ್ಯಾಂಗ್ಸ್ಟರ್ ಆಗಿ ಅಬ್ಬರಿಸಿದ ಅಕ್ಷಯ್ ಕುಮಾರ್
ಸಂದರ್ಶನವೊಂದರಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ಮಾತನಾಡಿದ ಅಕ್ಷಯ್ ಕುಮಾರ್, 'ವಿವೇಕ್ ಜಿ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ಮಾಡುವ ಮೂಲಕ ನಮ್ಮ ದೇಶದ ಅತ್ಯಂತ ನೋವಿನ ಸತ್ಯವನ್ನು ಮುಂದಿಟ್ಟಿದ್ದಾರೆ. ಅಂತಹ ಉಡುಗೊರೆಯಾಗಿ ಬಂದಿರುವ ಈ ಚಿತ್ರ ನನ್ನ ಚಿತ್ರ ಬಚ್ಚನ್ ಪಾಂಡೆಯನ್ನೂ ಹಿಂದಿಕ್ಕಿದೆ ಎನ್ನುವುದು ಬೇರೆ ಮಾತು ಎಂದಿದ್ದಾರೆ.