ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಬ್ಯುಸಿ ಕೆಲಸಗಳನ್ನೆಲ್ಲ ಪಕ್ಕಕ್ಕಿಟ್ಟು ಯುವಕರ ಜೊತೆ ವಾಲಿಬಾಲ್ ಆಡಿದ್ದಾರೆ. ಮುಂಬೈ ಬೀಚ್ ಬಳಿ ವಾಲಿಬಾಲ್ ಆಡಿರುವುದನ್ನು ಕಿಲಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಬೀಚ್ ತೀರದಲ್ಲಿ ವಾಲಿಬಾಲ್ ಆಡಿದ ಬಾಲಿವುಡ್ ಕಿಲಾಡಿ-ವಿಡಿಯೋ - ಬೀಚ್ ತೀರದಲ್ಲಿ ವಾಲಿಬಾಲ್ ಆಡಿದ ಬಾಲಿವುಡ್ ಕಿಲಾಡಿ
ಅಕ್ಷಯ್ ಕುಮಾರ್ ಯುವಕರ ಜೊತೆ ಮುಂಬೈ ಬೀಚ್ ಬಳಿ ವಾಲಿಬಾಲ್ ಆಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ವಿಡಿಯೋ : ಬೀಚ್ ತೀರದಲ್ಲಿ ವಾಲಿಬಾಲ್ ಆಡಿದ ಬಾಲಿವುಡ್ ಕಿಲಾಡಿ
ವಿಡಿಯೋ ಹಾಕಿರುವ ಅಕ್ಕಿ, ಬೀಚ್ ದಡದಲ್ಲಿ ಹುಡುಗರ ಜೊತೆ ವಾಲಿಬಾಲ್ ಆಟಕ್ಕೆ ಸೇರಿಕೊಂಡಿದ್ದೇನೆ. ನಮಗೆ ವ್ಯಾಯಾಮ ಮಾಡಲು, ಬೆವರಿಳಿಸಲು ಯಾವಾಗ್ಲು ಜಿಮ್ಗೇ ಹೋಗಬೇಕಿಲ್ಲ. ಆಟವಾಡಿದ್ದು ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರ ಈ ರೀತಿಯ ಔಟಿಂಗ್ ಹೊಸದೇನಲ್ಲ. ಈ ಹಿಂದೆಯೂ ಹಲವು ಬಾರಿ ವಾಲಿಬಾಲ್ ಆಡಿದ್ದರು. ಕಳೆದ ಬಾರಿ ಜುಹು ಬೀಚ್ನಲ್ಲಿ ವಾಲಿಬಾಲ್ ಆಡಿದ್ದ ಅನುಭವವನ್ನು ಹಂಚಿಕೊಂಡಿದ್ದ ಕಿಲಾಡಿ, 'ಸೂಪರ್ಬ್ ಸಂಡೇ ಮಾರ್ನಿಂಗ್' ಎಂದು ಬರೆದುಕೊಂಡಿದ್ದರು.