ಕರ್ನಾಟಕ

karnataka

ETV Bharat / sitara

ವೈವಿಧ್ಯತೆಯ ರಾಜಕೀಯ ನಿಲುವು.. ಕೌಟುಂಬಿಕ ಬಂಧುತ್ವ.. ಆಜಾದ್‌-ಮೋದಿ ಬಾಂಧವ್ಯ ಹೀಗಿದೆ.. - ಗುಲಾಮ್​​ ನಬಿ ಆಜಾದ್​​ ರಾಜಕೀಯ ನಿವೃತ್ತಿ

ನೀವು ನಮ್ಮ ಬಗ್ಗೆ ತಿಳಿಸಿದುಕೊಂಡಿರುವುದು ತಪ್ಪು. ನಾವು ಬೇರೆ ಬೇರೆ ಪಕ್ಷದವರು ಇರಬಹುದು. ಆದ್ರೆ, ಎಲ್ಲರೂ ಒಂದೇ ಕುಟುಂಬದವರಂತೆ ಇದ್ದೇವೆ...

ಗುಲಾಮ್​​ ನಬಿ ಆಜಾದ್​​ ರಾಜಕೀಯ ನಿವೃತ್ತಿ : 2019ರಲ್ಲಿ ಮೋದಿ ಆಜಾದ್​ ಬಗ್ಗೆ ಹೇಳಿದ್ದಿದು!
ಗುಲಾಮ್​​ ನಬಿ ಆಜಾದ್​​ ರಾಜಕೀಯ ನಿವೃತ್ತಿ : 2019ರಲ್ಲಿ ಮೋದಿ ಆಜಾದ್​ ಬಗ್ಗೆ ಹೇಳಿದ್ದಿದು!

By

Published : Feb 9, 2021, 3:53 PM IST

Updated : Feb 9, 2021, 4:20 PM IST

ಕಾಂಗ್ರೆಸ್​​ನ ಹಿರಿಯ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಇಂದು ರಾಜಕೀಯ ನಿವೃತ್ತಿ ಪಡೆದಿದ್ದಾರೆ. ಎಲ್ಲ ಪಕ್ಷಗಳ ಬಹುತೇಕ ನಾಯಕರು ಆಜಾದ್ ಅವರ ನಿವೃತ್ತಿ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ತುಂಬಾ ಭಾವನಾತ್ಮಕವಾಗಿ ಆಜಾದ್‌ ಅವರ ಕುರಿತು ಮಾತನಾಡಿದ್ದರು. ಅಷ್ಟೇ ಅಲ್ಲ, ಬಾಲಿವುಡ್​ ನಟ ಅಕ್ಷಯ್​ ಕುಮಾರ್ 2019ರಲ್ಲಿ ನಡೆಸಿದ್ದ ಸಂದರ್ಶನದಲ್ಲೂ ಗುಲಾಮ್ ನಬಿ ಆಜಾದ್ ಬಗ್ಗೆ ಮೋದಿ ಹೇಳಿರುವ ಮಾತು ಇಲ್ಲಿ ನೆನೆಯಬಹುದು.

ಅಕ್ಷಯ್​ ಕುಮಾರ್​​, ವಿರೋಧ ಪಕ್ಷದಲ್ಲಿ ನಿಮಗೆ ಯಾರಾದ್ರೂ ಸ್ನೇಹಿತರು ಇದ್ದಾರಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಮೋದಿ, ಹೌದು ನನಗೆ ವಿರೋಧ ಪ್ರಕ್ಷದಲ್ಲಿ ತುಂಬಾ ಜನ ಸ್ನೇಹಿತರಿದ್ದಾರೆ ಎಂದಿದ್ದಾರೆ. ಇದೇ ವೇಳೆ ಗುಲಾಮ್​ ನಬಿ ಆಜಾದ್ ನನಗೆ​​ ಸ್ನೇಹಿತರು ಎಂದು ಮೋದಿ ಹೇಳಿದ್ದಾರೆ.

ಗುಲಾಮ್​​ ನಬಿ ಆಜಾದ್​- ಮೋದಿ ಬಾಂಧವ್ಯ ಹೀಗಿದೆ..

ಇದೇ ವೇಳೆ ಹಿಂದೆ ನಡೆದ ಒಂದು ಸನ್ನಿವೇಶವನ್ನು ಮೋದಿ ನೆನೆದಿದ್ದಾರೆ. ಅಂದು ನಾನು ಇನ್ನೂ ಪ್ರಧಾನಿ, ಮುಖ್ಯಮಂತ್ರಿಯೂ ಆಗಿರಲಿಲ್ಲ. ಆ ವೇಳೆ ಸಂಸತ್ತಿಗೆ ನಾನು ಮತ್ತು ಗುಲಾಮ್​ ನಬಿ ಆಜಾದ್​​ ಜೊತೆಗೆ ಹೋಗಿ ಸ್ನೇಹಿತರಾಗಿಯೇ ಮಾತನಾಡುತ್ತ ಜೊತೆಯಲ್ಲೇ ಸಂಸತ್ತಿನಿಂದ ಹೊರಗೆ ಬಂದ್ವಿ.

ನಂತರ ಮಾಧ್ಯಮದವರು, ನೀವು ಆರ್​​ಎಸ್​​ಎಸ್​​​ ಮೂಲದವರಲ್ಲ. ಆದ್ರೂ ನೀವಿಬ್ಬರು ಹೇಗೆ ಸ್ನೇಹಿತರು ಎಂದು ಗುಲಾಮ್​​ ನಬಿ ಆಜಾದ್​ರನ್ನು ಕೇಳಿದ್ರು. ಅಂದು ಮಾಧ್ಯಮದವರ ಪ್ರಶ್ನೆಗೆ ಆಜಾದ್​ ಒಳ್ಳೆ ಉತ್ತರ ನೀಡಿದ್ರು, 'ನೀವು ನಮ್ಮ ಬಗ್ಗೆ ತಿಳಿಸಿದುಕೊಂಡಿರುವುದು ತಪ್ಪು.

ನಾವು ಬೇರೆ ಬೇರೆ ಪಕ್ಷದವರು ಇರಬಹುದು. ಆದ್ರೆ, ಎಲ್ಲರೂ ಒಂದೇ ಕುಟುಂಬದವರಂತೆ ಇದ್ದೇವೆ. ನಾವು ಹೇಗೆ ಅನ್ಯೂನ್ಯತೆಯಿಂದ ಇರುತ್ತೇವೆ ಅಂತಾ ನೀವು ಕಲ್ಪಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ' ಅಂತಾ ಗುಲಾಮ್​ ನಬಿ ಆಜಾದ್​ ಉತ್ತರಿಸಿದ್ದನ್ನ ಮೋದಿ ಸಂದರ್ಶನದಲ್ಲಿ ಸ್ಮರಿಸಿದ್ದರು.

Last Updated : Feb 9, 2021, 4:20 PM IST

ABOUT THE AUTHOR

...view details