ಕರ್ನಾಟಕ

karnataka

ETV Bharat / sitara

ಕಾವ್ಯಾಂಜಲಿ ಧಾರಾವಾಹಿಯ ಅಂಜಲಿ ಪಾತ್ರಕ್ಕೆ ಅಕ್ಷತಾ ದೇಶಪಾಂಡೆ ಎಂಟ್ರಿ - ಕಾವ್ಯಾಂಜಲಿ ಧಾರಾವಾಹಿ

ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿಯಾಗಿ ನಟಿಸುತ್ತಿರುವ ದೀಪಾ ಜಗದೀಶ್ ಧಾರಾವಾಹಿಯಿಂದ ಹೊರ ಬರುತ್ತಿದ್ದು, ಆ ಪಾತ್ರಕ್ಕೆ ಅಕ್ಷತಾ ದೇಶಪಾಂಡೆ ಬಣ್ಣ ಹಚ್ಚಲಿದ್ದಾರೆ.

Akshata Deshpande
ಅಕ್ಷತಾ ದೇಶಪಾಂಡೆ

By

Published : Jun 4, 2021, 8:08 AM IST

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರಧಾರಿ ಮೂರನೇ ಬಾರಿಗೆ ಬದಲಾಗುತ್ತಿದ್ದಾರೆ.‌

ಅಂಜಲಿಯಾಗಿ ನಟಿಸುತ್ತಿರುವ ದೀಪಾ ಜಗದೀಶ್ ಕಾವ್ಯಾಂಜಲಿ ಧಾರಾವಾಹಿಯಿಂದ ಹೊರ ಬರುತ್ತಿರುವ ವಿಚಾರ ತಿಳಿದಿರುವುದೇ. ಇದೀಗ ಆ ಪಾತ್ರಕ್ಕೆ ಮತ್ತೋರ್ವ ನಟಿ ಎಂಟ್ರಿ ಆಗುತ್ತಿದ್ದಾರೆ. ಅವರೇ ಅಕ್ಷತಾ ದೇಶಪಾಂಡೆ.

ಅಕ್ಷತಾ ದೇಶಪಾಂಡೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕಿ ಅಪರ್ಣಾ ಆಗಿ ನಟಿಸುತ್ತಿರುವ ಅಕ್ಷತಾ ದೇಶಪಾಂಡೆ ಇನ್ನು ಮುಂದೆ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿಯಾಗಿ ಮನರಂಜನೆ ನೀಡಲಿದ್ದಾರೆ.

ಇದನ್ನೂ ಓದಿ:ನಟಿಯಿಂದ ಮೆಂಟರ್ ಆಗಿ ಬದಲಾದ ರಶ್ಮಿ ಪ್ರಭಾಕರ್!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಮೊದಲ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ಮಿಂಚಿ ಅತಿ ಹೆಚ್ಚಿನ ಪ್ರೇಕ್ಷಕರ ಮನ ಗೆದ್ದಿದ್ದರು. ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅಮೃತ ಹಾಗೂ ವರ್ಷ ಎಂಬ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಕ್ಷತಾ ಇನ್ನು ಮುಂದೆ ಅಂಜಲಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ.

ABOUT THE AUTHOR

...view details