ಕರ್ನಾಟಕ

karnataka

ETV Bharat / sitara

ಮಂಗಳೂರಿನಲ್ಲಿ ಹತ್ಯೆಯಾದ ಆ ಡಾನ್ ಬಯೋಪಿಕ್​​​​​​ನಲ್ಲಿ ನಟಿಸಲಿದ್ದಾರೆ ಅಜಿತ್..!

ಮಂಗಳೂರು ಭೂಗತ ಪಾತಕಿ, ಹಲವು ವರ್ಷಗಳ ಹಿಂದೆ ಹತ್ಯೆಯಾದ ಅಮರ್ ಆಳ್ವ ಬಯೋಪಿಕ್​​​​ನಲ್ಲಿ ಅಜಿತ್ ಜಯರಾಜ್ ನಟಿಸುತ್ತಿದ್ದು ಈ ಚಿತ್ರವನ್ನು ಲೋಕೇಶ್ ಶೆಟ್ಟಿ ಎಂಬುವವರು ನಿರ್ಮಿಸಿ ನಿರ್ದೇಶಿಸಲಿದ್ದಾರೆ.

Ajit Jayaraj
ಅಜಿತ್ ಜಯರಾಜ್

By

Published : Jun 5, 2020, 3:35 PM IST

1992 ರಲ್ಲಿ ಹತ್ಯೆಯಾದ ಮಂಗಳೂರಿನ ಭೂಗತ ಲೋಕದ ಅಮರ್ ಆಳ್ವ ಬಯೋಪಿಕ್​​​​​​​ ಸಿನಿಮಾ ಬರುತ್ತಿದ್ದು ಅಮರ್ ಆಳ್ವ ಪಾತ್ರವನ್ನು ರಿಷಭ್ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ನಿಟೇಶ್​ ಎಂಬ ಯುವ ನಿರ್ದೇಶಕ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು.

ಆದರೆ ಈಗ ಅಮರ್ ಆಳ್ವ ಪಾತ್ರವನ್ನು ಮಾಜಿ ಡಾನ್, ​ದಿವಂಗತ ಎಂ.ಪಿ. ಜಯರಾಜ್​​ ಪುತ್ರ ಅಜಿತ್ ಜಯರಾಜ್ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ 'ಒನ್ಸ್ ಅಪಾನ್​​​ ಎ ಟೈಮ್ ಇನ್ ಮಂಗಳೂರು' ಎಂದು ಹೆಸರಿಡಲಾಗಿದೆ. ಈಗಾಗಲೇ ಅಜಿತ್ ಹನಿ ಹನಿ, ಆಗಮ್ಯ, ತ್ರಾಟಕ, ಆ ದೃಶ್ಯ, ರೈಮ್ಸ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಅಗ್ನಿ ಶ್ರೀಧರ್​ ಕಥೆ, ಚಿತ್ರಕಥೆ ಬರೆದಿರುವ ತಂದೆ ಜಯರಾಜ್​ ಅವರ ಬಯೋಪಿಕ್​​ನಲ್ಲೂ ನಟಿಸಲು ರೆಡಿಯಾಗಿದ್ದಾರೆ. ಇದರಲ್ಲಿ ಎಂ.ಪಿ. ಜಯರಾಜ್ ಪಾತ್ರವನ್ನು ಡಾಲಿ ಧನಂಜಯ್ ಮಾಡಲಿದ್ದಾರೆ. ಶೂನ್ಯ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಲಿದ್ದು ಆಶು ಬೆದ್ರ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಅಜಿತ್ ಜಯರಾಜ್

ಇನ್ನು ಅಮರ್ ಆಳ್ವ ಜೀವನ ಆಧಾರಿತ ಸಿನಿಮಾವನ್ನು ಲೋಕೇಶ್ ಶೆಟ್ಟಿ ಎಂಬುವವರು ನಿರ್ಮಿಸಿ ನಿರ್ದೇಶಿಸಲಿದ್ದಾರೆ. ಲೆಮನ್ ಗ್ರಾಸ್ ಸ್ಟುಡಿಯೋ ಬ್ಯಾನರ್ ಅಡಿ ಲೋಕೇಶ್ ಈ ಚಿತ್ರವನ್ನು ಮಾಡುತ್ತಿದ್ದಾರೆ. ಲೋಕೇಶ್ ಶೆಟ್ಟಿ ಈ ಚಿತ್ರದ ಶೀರ್ಷಿಕೆಯನ್ನು 2 ವರ್ಷಗಳ ಹಿಂದೆಯೇ ರಿಜಿಸ್ಟರ್ ಮಾಡಿಸಿದ್ದರು. ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಈ ಸಿನಿಮಾ ತಯಾರಾಗಲಿದೆ ಎನ್ನಲಾಗಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಶಾಂತ್ ಪೂಜಾರಿ ಹಾಗೂ ಟಿಮುಲ್ ಬಾಲ್ಯನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಸಪನ್ ನರೂಲ ಛಾಯಾಗ್ರಹಣ ಮಾಡಲಿದ್ದಾರೆ. ಲಾಕ್​​​ಡೌನ್ ಸಡಿಲಿಕೆ ನಂತರ ಸಿನಿಮಾ ಸೆಟ್ಟೇರಲಿದೆ.

ABOUT THE AUTHOR

...view details