'ಲವ್ ಯು ರಚ್ಚು' ಸ್ಯಾಂಡಲ್ವುಡ್ನಲ್ಲಿ ಒಂದಲ್ಲ, ಒಂದು ವಿಷಯಕ್ಕೆ ಸದ್ದು ಮಾಡುತ್ತಿರೋ ಸಿನಿಮಾ. ಅಜಯ್ ರಾವ್ ಜೊತೆ ರಚಿತಾ ರಾಮ್ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿದ್ದು, ಸದ್ಯಕ್ಕೆ ಟ್ರೇಲರ್ನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಮುದ್ದಾದ ಟೈಟಲ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಈ ಟೈಟಲ್ ಹುಟ್ಟಿದ್ದು ಹೇಗೆ ಅನ್ನೋದನ್ನ ನಟ ಅಜಯ್ ರಾವ್ ಬಿಚ್ಚಿಟ್ಟಿದ್ದಾರೆ. ಹೌದು, ಈ ಚಿತ್ರದ ಕಥೆಯನ್ನ ಬರೆದಿರುವ ನಿರ್ದೇಶಕ ಶಶಾಂಕ್ ಹಾಗು ಈ ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿರುವ ಗುರು ದೇಶಪಾಂಡೆ ಜೊತೆ ಕುಳಿತು ಚರ್ಚೆ ಮಾಡಬೇಕಾದ್ರೆ ಸಿಕ್ಕಿದ್ದೇ ಲವ್ ಯು ರಚ್ಚು ಟೈಟಲ್ ಅಂತೆ.
ಅಜಯ್ ರಾವ್ಗೆ ಲವ್ ಸ್ಟೋರಿ ಎಂಬ ಪದ ಲಕ್ಕಿ ಅನ್ನೋದು ನಿರ್ದೇಶಕ ಶಶಾಂಕ್ ನಂಬಿಕೆ. ಯಾಕಂದ್ರೆ, ಅಜಯ್ ರಾವ್ ಲವ್ ಎಂಬ ಪದ ಬಳಸಿ ಇಟ್ಟಿರುವ ಟೈಟಲ್ ಸಿನಿಮಾಗಳು ಹಿಟ್ ಆಗಿವೆ. ಈ ಕಾರಣಕ್ಕೆ ಇಲ್ಲಿ ಕೂಡ 'ಲವ್ ಯು ರಚ್ಚು' ಎಂಬ ಟೈಟಲ್ ಇಡಲಾಗಿದೆಯಂತೆ. ಇದರ ಜೊತೆಗೆ ರಚ್ಚು ಅನ್ನೋದು ರಚಿತಾ ರಾಮ್ ಅವ್ರಿಗೆ ಕರೆಯುವ ಮತ್ತೊಂದು ಹೆಸರು. ಅಚ್ಚರಿ ಅಂದ್ರೆ ಈ ಸಿನಿಮಾ ಟೈಟಲ್ ಫಿಕ್ಸ್ ಮಾಡುವುದಕ್ಕಿಂತ ಮುಂಚೆಯೇ ರಚಿತಾ ರಾಮ್ ನಾಯಕಿ ಅಂತಾ ಮಾತುಕತೆ ಆಗಿತ್ತಂತೆ.