ಸ್ಯಾಂಡಲ್ವುಡ್ ಕೃಷ್ಣ ಎಂದೇ ಫೇಮಸ್ ಆಗಿರುವ ಅಜಯ್ ರಾವ್, ಇಂದು 5ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಯಾವುದೇ ಆಡಂಬರ ಇಲ್ಲದೆ ಪತ್ನಿ, ಮಗಳು ಮತ್ತು ಕುಟುಂಬದವರೊಂದಿಗೆ ಸರಳವಾಗಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ಕೃಷ್ಣ... - ಅಜಯ್ ರಾವ್ 5ನೇ ವರ್ಷದ ವಿವಾಹ ವಾರ್ಷಿಕೋತ್ಸವ
ಅಜಯ್ ರಾವ್ 2014 ಡಿಸೆಂಬರ್ 18 ರಂದು ಸ್ವಪ್ನ ಅವರ ಕೈ ಹಿಡಿದರು. ಇಂದಿಗೆ ಅಜಯ್ ರಾವ್ ದಂಪತಿ ಮದುವೆಯಾಗಿ 5 ವರ್ಷಗಳು ತುಂಬಿದ್ದು, ಪುತ್ರಿ ಜೊತೆ ಅಜಯ್ ಹಾಗೂ ಸ್ವಪ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

ತಮ್ಮ ಮ್ಯಾನರಿಸಂಗೆ ತಕ್ಕಂತೆ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವ ಅಜಯ್ ರಾವ್ 2014 ಡಿಸೆಂಬರ್ 18 ರಂದು ಸ್ವಪ್ನ ಅವರ ಕೈ ಹಿಡಿದರು. ಇವರಿಬ್ಬರಿಗೆ ಮುದ್ದಾದ ಹೆಣ್ಣು ಮಗುವಿದ್ದು ಮಗಳಿಗೆ ಚೆರಿಷ್ಮಾ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಚೆರಿಷ್ಮಾ ಹುಟ್ಟುಹಬ್ಬವನ್ನು ಅಜಯ್ ಆಚರಿಸಿದ್ದರು.
ಇಂದಿಗೆ ಅಜಯ್ ರಾವ್ ದಂಪತಿ ಮದುವೆಯಾಗಿ 5 ವರ್ಷಗಳು ತುಂಬಿದ್ದು, ಪುತ್ರಿ ಜೊತೆ ಅಜಯ್ ಹಾಗೂ ಸ್ವಪ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಯ್ ರಾವ್ ಸದ್ಯಕ್ಕೆ 'ಶೋಕಿವಾಲ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಡಬ್ಬಿಂಗ್ ಕಾರ್ಯ ಸಾಗಿದ್ದು, ಇನ್ನೆರಡು ದಿನಗಳಲ್ಲಿ ಅಜಯ್ ತಮ್ಮ ಭಾಗದ ಡಬ್ಬಿಂಗ್ ಆರಂಭಿಸಲಿದ್ದಾರೆ.