ಮುಂಬೈ:ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಾಯಿ ಬೃಂದಾ ರೈ ಅವರ ಜನ್ಮದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿಯಾದ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ತಾಯಿಯ ಜನ್ಮದಿನಕ್ಕೆ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ಐಶ್ವರ್ಯಾ - ತಾಯಿ ಬೃಂದಾ ರಾಯ್
ಐಶ್ವರ್ಯಾ ರೈ ಬಚ್ಚನ್ ತನ್ನ ತಾಯಿ ಬೃಂದಾ ರೈ ಹುಟ್ಟುಹಬ್ಬದ ಶುಭಾಶಯವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಕೋರಿದ್ದಾರೆ.
ತಾಯಿಯ ಜನ್ಮದಿನಕ್ಕೆ ಹೃದಯ ತುಂಬುವ ಪೋಸ್ಟ್ ಹಂಚಿಕೊಂಡ ಐಶ್ವರ್ಯಾ ರೈ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಡು ಫೋಟೊಗಳನ್ನು ಐಶ್ವರ್ಯ ಶೇರ್ ಮಾಡಿದ್ದಾರೆ. ಇದರಲ್ಲಿ ಒಂದು ಫೋಟೋ ತಾಯಿಯ ಚಿತ್ರವನ್ನು ಹೊಂದಿದ್ದರೆ, ಇನ್ನೊಂದರಲ್ಲಿ ಮೊಮ್ಮಗಳು ಆರಾಧ್ಯ ಬಚ್ಚನ್ ಜೊತೆಗೆ ತಾಯಿ ಬೃಂದಾ ರಾಯ್ರೊಂದಿಗೆ ಐಶ್ವರ್ಯ ನಿಂತಿದ್ದಾರೆ.
ಈ ರೀತಿಯ ಸುಂದರ ಕ್ಷಣದ ಫೋಟೋವನ್ನು ಹಂಚಿಕೊಂಡಿರುವ ಐಶ್ವರ್ಯ, ಅವರ್ ಡಾರ್ಲಿಂಗ್ ಮಮ್ಮಿ- ದೊಡ್ಡಾ.. ವಿ ಲವ್ ಯೂ. ಬರ್ತ್ ಡೇ ಗರ್ಲ್, ಶೈನ್ ಆನ್ ಎಂದು ಬರೆದುಕೊಂಡಿದ್ದಾರೆ.