ಹೈದರಾಬಾದ್: ಮಾಜಿ ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಐಶ್ವರ್ಯ ರೈ ಮತ್ತೊಮ್ಮೆ ಪ್ರೆಗ್ನೆಂಟ್ ಆಗಿದ್ದಾರೆಂಬ ಸುದ್ದಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಹರಿದಾಡುತ್ತಿದೆ.
‘ಇದಕ್ಕೆ ಮತ್ತಷ್ಟು ಪ್ರಬಲವಾದ ಸಾಕ್ಷಿ ಸಿಕ್ಕಿದ್ದು, ನಿನ್ನೆಯಷ್ಟೇ ಮಧ್ಯಪ್ರದೇಶದಿಂದ ಮುಂಬೈ ಏರ್ಪೋರ್ಟ್ಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಅವರ ಫೋಟೊ ಮತ್ತು ವೀಡಿಯೋ ಸೆರೆ ಹಿಡಿಯಲಾಗಿದೆ. ಬೇಬಿ ಬಂಪ್ ನೋಡಿರುವ ಅನೇಕ ನೆಟ್ಟಿಗರು ಮತ್ತೊಮ್ಮೆ ಗರ್ಭಿಣಿಯಾಗಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಮಣಿರತ್ನಂ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್'ನಲ್ಲಿ ಐಶ್ವರ್ಯ ರೈ ನಟನೆ ಮಾಡಿದ್ದು, ಅದಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದರು. ಶೂಟಿಂಗ್ನಲ್ಲಿ ಭಾಗಿಯಾಗಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಮುಂಬೈನ ಕಲಿನಾ ಏರ್ಪೋರ್ಟ್ನಲ್ಲಿ ಅವರ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲಾಗಿದೆ.
ಇದರಲ್ಲಿ ಅವರು ಗರ್ಭಿಣಿಯಾಗಿದ್ದಾರೆಂಬ ಅನುಮಾನ ಹುಟ್ಟಿಸುವ ಫೋಟೋ ವೈರಲ್ ಆಗಿದೆ. ಐಶ್ವರ್ಯ ರೈ ಗರ್ಭಿಣಿಯಾಗಿರುವುದರಿಂದಲೇ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ಕಾರು ಹತ್ತಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನಿಸಿಕೆಗಳನ್ನು ಬರೆದುಕೊಂಡಿದ್ದಾರೆ.