ಕರ್ನಾಟಕ

karnataka

ETV Bharat / sitara

ಅಗ್ನಿಸಾಕ್ಷಿ ರಾಧಿಕಾ ಪಾತ್ರಧಾರಿ ಅನುಷಾ ರಿಯಲ್ ಪತಿ ಬಗ್ಗೆ ನಿಮಗೆಷ್ಟು ಗೊತ್ತು? - ಕಿರುತರೆ ನಟಿ ಅನುಷಾ ರಾವ್

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಅತ್ತಿಗೆ ಆಗಿ ಅಭಿನಯಿಸಿದ್ದ ಅನುಷಾ ರಾವ್ ಪತಿ ಮನೋಹರ್ ಜೋಶಿ ಕೂಡ ಸಿನಿಮಾ ನಂಟುಳ್ಳವರೇ ಆಗಿದ್ದಾರೆ.

agnisakshi
agnisakshi

By

Published : May 19, 2021, 3:32 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಅತ್ತಿಗೆ ಆಗಿ ಅಭಿನಯಿಸಿದ್ದ ಅನುಷಾ ರಾವ್, ದುರ್ಗಾ ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದರು. ಸುಬ್ಬಲಕ್ಷ್ಮಿ ಸಂಸಾರ, ದೊಡ್ಮನೆ ಸೊಸೆ, ಮನೆಯೇ ಮಂತ್ರಾಲಯ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ಅನುಷಾ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ಇಂತಿಪ್ಪ ಅನುಷಾ ರಾವ್ ಅವರ ಪತಿ ಮನೋಹರ್ ಜೋಶಿ ಕೂಡಾ ಬಣ್ಣದ ಲೋಕದಲ್ಲಿ ಫೇಮಸ್ಸು! ಮನೋಹರ್ ಜೋಶಿ ಕನ್ನಡದ ಭರವಸೆಯ ಸಿನಿಮಾಟೋಗ್ರಾಫರ್​ಗಳಲ್ಲಿ ಒಬ್ಬರು. ಕಾಲೇಜು ದಿನಗಳಲ್ಲಿ ಫೋಟೋಗ್ರಫಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮನೋಹರ್ ಜೋಶಿ ಹಲವಾರು ಫೋಟೋಗ್ರಫಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮುಂದೆ ಸ್ನೇಹಿತರೊಬ್ಬರ ಒತ್ತಾಯದ ಮೇರೆಗೆ ಡಾಕ್ಯುಮೆಂಟರಿಗೆ ಸಿನಿಮಾಟೋಗ್ರಫಿ ಮಾಡುವಂತೆ ಮಾಡಲು ಒಪ್ಪಿಗೆ ನೀಡಿದ ಮನೋಹರ್ ಜೋಶಿ ಅದ್ಭುತ ಕೆಲಸದ ಮೂಲಕ ತಮ್ಮ ಆತ್ಮವಿಶ್ವಾಸ ಇಮ್ಮಡಿಮಾಡಿಕೊಂಡಿದ್ದು ಮಾತ್ರವಲ್ಲದೇ, ಮುಂದೆ ಅವರು ಕಾಲೇಜು ಮುಗಿಸಿದ ನಂತರ ಸಿನಿಮಾಟೋಗ್ರಫಿಯನ್ನು ಕೆರಿಯರ್ ಆಗಿ ತೆಗೆದುಕೊಂಡರು.

ನನ್ ಲೈಫ್ ಅಲ್ಲಿ ಸಿನಿಮಾದ ಮೂಲಕ ಕರಿಯರ್ ಆರಂಭಿಸುತ್ತಾರೆ. ಆದರೆ ಕಾರಣಾಂತರಗಳಿಂದ ಈ ಚಿತ್ರ ಬಿಡುಗಡೆಯಾಗುವುದಿಲ್ಲ. ಎರಡನೇ ಸಿನಿಮಾ 'ಸೈಬರ್ ಯುಗದೊಳ್' ನವಯುವ ಮಧುರ ಪ್ರೇಮಕಾವ್ಯಂ ಸಿನಿಮಾ ಪ್ರೇಕ್ಷಕರ ಮನಗೆಲ್ಲುವುದಿಲ್ಲ. ನಿರ್ದೇಶಕ ಸುನಿ ಈ ಸಿನಿಮಾದ ಸಿನಿಮಾಟೋಗ್ರಾಫಿ ನೋಡಿ ಮನೋಹರ್ ಜೋಶಿ ಅವರನ್ನು ಸಂದರ್ಶನಕ್ಕೆ ಕರೆಯುತ್ತಾರೆ. ಕಾಲೇಜು ದಿನಗಳಲ್ಲಿ ಚಿತ್ರೀಕರಿಸಿದ ಡಾಕ್ಯುಮೆಂಟರಿಗಳು, ಕಿರುಚಿತ್ರಗಳನ್ನು ನೋಡಿದ ಸುನಿ ತಮ್ಮ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾಕ್ಕೆ ಇವರನ್ನೇ ಸಿನಿಮಾಟೋಗ್ರಾಫರ್ ಆಗಿ ಆರಿಸುತ್ತಾರೆ. ಈ ಸಿನಿಮಾ ಹಿಟ್ ಆಗಿ ಕ್ಯಾಮರಾ ಕೆಲಸ ಮನಗೆಲ್ಲುತ್ತದೆ. ಇದೀಗ ಸಿನಿಮಾಟೋಗ್ರಫಿ ಅಲ್ಲದೇ ಪ್ರೊಡಕ್ಷನ್ ಹಾಗೂ ನಿರ್ದೇಶನದಲ್ಲಿಯೂ ಮನೋಹರ್​ ಜೋಶಿ ತೊಡಗಿಸಿಕೊಂಡಿದ್ದಾರೆ.

ABOUT THE AUTHOR

...view details