ಸಿನಿಮಾ ಹಾಗೂ ರಾಜಕೀಯದಲ್ಲಿ ಅವ್ರ ಅಭಿಮಾನಿಗಳು, ನೆಚ್ಚಿನ ನಟ ಹಾಗೂ ನಾಯಕರ ಬಗ್ಗೆ ವಿಭಿನ್ನ ರೂಪದಲ್ಲಿ ಅಭಿಮಾನವನ್ನ ಮೆರೆಯುತ್ತಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬುದ್ದಿವಂತ ನಟ ಹಾಗೂ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಉಪೇಂದ್ರ ಹುಟ್ಟು ಹಾಕಿರೋ ಪ್ರಜಾಕೀಯ ಪಕ್ಷದ ಹೆಸರು ಕರ್ನಾಟಕದಲ್ಲಿ ಸದ್ದು ಮಾಡುತ್ತಿದೆ.
ಅಗರಬತ್ತಿ ಕಂಪನಿಗೆ ಉಪೇಂದ್ರ ಪ್ರಜಾಕೀಯ ಪಕ್ಷದ ಹೆಸರು! - ನಟ ಉಪೇಂದ್ರ ಸುದ್ದಿ
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಲಕೊಂಡದ ಚನ್ನು ಹಿರೇಮಠ ಎಂಬುವವರು, ತಮ್ಮ ಅಗರಬತ್ತಿ ಕಂಪನಿಗೆ ಪ್ರಜಾಕೀಯ ಎಂದು ಹೆಸರಿಟ್ಟು ಗಮನ ಸೆಳೆದಿದ್ದಾರೆ.
ರಾಜಕೀಯ ಪಕ್ಷಗಳಿಗಿಂತ ತೀರಾ ವಿಭಿನ್ನವಾದ ಆಲೋಚನೆ ಹಾಗೂ ಉದ್ದೇಶ ಇಟ್ಟುಕೊಂಡು ಪಕ್ಷ ಕಟ್ಟುತ್ತಿರುವ ಉಪೇಂದ್ರ ಪ್ರಜಾಕೀಯ, ನಿಧಾನವಾಗಿ ಹಳ್ಳಿಗಳಿಗೆ ತಲುಪುತ್ತಿದೆ. ಈ ಮಾತಿಗೆ ಪೂರಕವಾಗಿ ಅಗರಬತ್ತಿ ಕಂಪನಿಗೆ ಪ್ರಜಾಕೀಯ ಅಂತಾ ಹೆಸರು ಇಟ್ಟಿರೋದು ಇದೀಗ ಗಮನ ಸೆಳೆದಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಲಕೊಂಡದ ಚನ್ನು ಹಿರೇಮಠ ಎಂಬುವವರು, ತಮ್ಮ ಅಗರಬತ್ತಿ ಕಂಪನಿಗೆ ಪ್ರಜಾಕೀಯ ಎಂದು ಹೆಸರಿಟ್ಟು ಗಮನ ಸೆಳೆದಿದ್ದಾರೆ. ಚನ್ನು ಹಿರೇಮಠ ತಮ್ಮ ಅಗರಬತ್ತಿ ಕಂಪನಿಗೆ ಪ್ರಜಾಕೀಯ ಅಂತ ಹೆಸರು ಇಟ್ಟಿರೋದನ್ನ ನೋಡಿ ಉಪೇಂದ್ರ ಕೂಡ ಫಿದಾ ಆಗಿದ್ದಾರೆ. ಶುಭವಾಗಲಿ ಚನ್ನು ಎಂದು ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.