'ರೋಜಾ', 'ಬಾಂಬೆ' ಸಿನಿಮಾಗಳ ಖ್ಯಾತಿಯ ಅರವಿಂದ್ ಸ್ವಾಮಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆ ಸಿನಿಮಾಗಳ ನಂತರ ಅರವಿಂದ್ಗೆ ಭಾರೀ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡ್ರು. ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು ಅಂದ್ರೂ ತಪ್ಪಿಲ್ಲ.
20 ವರ್ಷಗಳ ನಂತರ ಮತ್ತೆ ಡಿಸ್ನಿ ಸಿನಿಮಾಗೆ ಧ್ವನಿ ನೀಡುತ್ತಿರುವ ಅರವಿಂದ್ ಸ್ವಾಮಿ - undefined
ತಮಿಳು ನಟ ಅರವಿಂದ್ ಸ್ವಾಮಿ ಸುಮಾರು 20 ವರ್ಷಗಳ ನಂತರ ಮತ್ತೆ ಅನಿಮೇಟೆಡ್ ಸಿನಿಮಾಗೆ ಧ್ವನಿ ನೀಡುತ್ತಿದ್ದಾರೆ. ಜಾನ್ ಫಾವ್ರೂ ನಿರ್ದೇಶನದ 'ದಿ ಲಯನ್ ಕಿಂಗ್' ಸಿನಿಮಾದ ಸ್ಕಾರ್ ಎಂಬ ಪಾತ್ರಕ್ಕೆ ಅವರು ಧ್ವನಿ ನೀಡುತ್ತಿದ್ದಾರೆ.

ಮಧ್ಯೆ ಕೆಲವು ವರ್ಷಗಳ ನಂತರ ಸಿನಿಮಾಗಳಿಂದ ದೂರವಿದ್ದ ಅರವಿಂದ್ ಸ್ವಾಮಿ 2013 ರಲ್ಲಿ ಮತ್ತೆ ಮಣಿರತ್ನಂ ನಿರ್ದೇಶನದ 'ಕಾದಲ್' ಸಿನಿಮಾ ಮೂಲಕ ಕಾಲಿವುಡ್ಗೆ ವಾಪಸಾದರು. ನಂತರ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. ಈಗ ಸಂತೋಷ್ ಜಯಕುಮಾರ್ ನಿರ್ದೇಶನದ 'ಪುಲನೈವು' ಸೆಲ್ವ ಅವರ ' ವನಂಗಮುಡಿ' , 'ಕಲ್ಲಪರ್ಟ್' 'ಸತುರಂಗ ವೆಟ್ಟೈ-2' ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದರೊಂದಿಗೆ ಅವರು ಮತ್ತೊಂದು ದೊಡ್ಡ ಪ್ರಾಜೆಕ್ಟ್ ಒಂದರ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ವಾಲ್ಟ್ ಡಿಸ್ನಿ ಸ್ಟುಡಿಯೋಸ್' ಸಂಸ್ಥೆಯಿಂದ ತಯಾರಾಗುತ್ತಿರುವ 'ದಿ ಲಯನ್ ಕಿಂಗ್' ಎಂಬ ಅನಿಮೇಟೆಡ್ ತಮಿಳು ವರ್ಷನ್ 'ಸ್ಕಾರ್' (scar) ಎಂಬ ಕ್ಯಾರೆಕ್ಟರ್ಗೆ ಅವರು ಧ್ವನಿ ನೀಡುತ್ತಿದ್ದಾರೆ. 20 ವರ್ಷಗಳ ಹಿಂದೆ 'ಸಿಂಬ' ಎಂಬ ಅನಿಮೇಟೆಡ್ ಕ್ಯಾರೆಕ್ಟರ್ಗೆ ಅವರು ಧ್ವನಿಯಾಗಿದ್ದರು. ಈ ವಿಷಯವನ್ನು ಅರವಿಂದ್ ಸ್ವಾಮಿ ತಮ್ಮ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.
'ಐರನ್ ಮ್ಯಾನ್', 'ಜಂಗಲ್ ಬುಕ್' ಸಿನಿಮಾಗಳನ್ನು ನಿರ್ದೇಶಿಸಿದ್ದ ಜಾನ್ ಫಾವ್ರೂ 'ದಿ ಲಯನ್ ಕಿಂಗ್' ಅನಿಮೇಟೆಡ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ನಾಲ್ಕೂ ಭಾಷೆಗಳಲ್ಲೂ ಜುಲೈ 19 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.