ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ್ ಆನೆಯೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ದರ್ಶನ್ ಅವರ ಕಾರ್ಯಕ್ಕೆ ಉಪ್ಪಿ ಕೈ ಜೋಡಿಸಿದ್ದಾರೆ.
ಆಫ್ರಿಕನ್ ಆನೆ ದತ್ತು ಪಡೆದು ದರ್ಶನ್ ಮನವಿ ಬೆಂಬಲಿಸಿದ ರಿಯಲ್ ಸ್ಟಾರ್ ಉಪ್ಪಿ - ನಟ ಉಪೇಂದ್ರ,
ರಾಜ್ಯದ 9 ಮೃಗಾಲಯಗಳಲ್ಲಿನ ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿಗೆ ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಎಲ್ಲ ಝೂಗಳಿಗೆ ಹರಿದು ಬಂದ ಹಣ ಇದೀಗ ಕೋಟಿಗೂ ಹೆಚ್ಚಾಗಿದೆ.
ದರ್ಶನ್ ಮಾತಿಗೆ ಕೈ ಜೋಡಿಸಿದ ರಿಯಲ್ ಸ್ಟಾರ್ ಉಪೇಂದ್ರ
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಉಪೇಂದ್ರ, ಪ್ರಾಣಿಗಳೇ ಗುಣದಲ್ಲಿ ಮೇಲು. ಚಾಲೆಂಜಿಂಗ್ ಸ್ಟಾರ್ ದರ್ಶನ್ರವರ ಕರೆಯಂತೆ ಮೈಸೂರಿನ ಮೃಗಾಲಯದಿಂದ ಆಫ್ರಿಕನ್ ಆನೆ ದತ್ತು ಪಡೆದು ದರ್ಶನ್ ಕೆಲಸಕ್ಕೆ ಕೈಜೋಡಿಸಿದ್ದೇನೆ ಎಂದಿದ್ದಾರೆ.
ಕಳೆದ 6 ದಿನದಲ್ಲಿ ರಾಜ್ಯದ ಎಲ್ಲಾ ಮೃಗಾಲಯಗಳಿಗೆ 1 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ.
Last Updated : Jun 11, 2021, 12:59 PM IST