ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಅಭಿನಯದ ಯಾವುದೇ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿಲ್ಲ. ದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಚಕ್ರವರ್ತಿ' ಸಿನಿಮಾದಲ್ಲಿ ಅವರು ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.
'ಡೆಡ್ಲಿ' ಆದಿ ಹುಟ್ಟುಹಬ್ಬಕ್ಕೆ 'ಮುಂದುವರೆದ ಅಧ್ಯಾಯ' ಟೀಸರ್ ರಿಲೀಸ್ - undefined
ಆದಿತ್ಯ ನಟನೆಯ 'ಮುಂದುವರೆದ ಅಧ್ಯಾಯ' ಸಿನಿಮಾ ಟೀಸರ್ ನಾಳೆ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. ಆದಿತ್ಯ ಆತ್ಮೀಯ ಗೆಳೆಯ, ನಟ ದರ್ಶನ್ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.
2017ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಆದಿತ್ಯ ಗೆಸ್ಟ್ ರೋಲ್ನಲ್ಲಿ ನಟಿಸಿದ್ದರು. ಇದೀಗ ಅವರು 'ಮುಂದುವರೆದ ಅಧ್ಯಾಯ' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಮೇ 4 ರಂದು ಅಂದರೆ ನಾಳೆ ಆದಿತ್ಯ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.
ಕಣಜ ಎಂಟರ್ಪ್ರೈಸಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಸಿನಿಮಾವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸುತ್ತಿದ್ದಾರೆ. ಜಾನಿ-ನಿತಿನ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಥ್ರಿಲ್ಲರ್ ಕಥಾವಸ್ತು ಜೊತೆಗೆ ಸಮಾಜಕ್ಕೆ ಹತ್ತಿರವಾಗುವ ವಿಚಾರ ಇರುವ ಈ ಚಿತ್ರದ ನಾಯಕಿಯಾಗಿ ಆಶಿಕ ಸೋಮಶೇಖರ್ ನಟಿಸುತ್ತಿದ್ದಾರೆ. ಅಜಯ್ರಾಜ್, ಸಂದೀಪ್ ಕುಮಾರ್, ಭಾಸ್ಕರ್ ವಿನೋದ್, ಚಂದನ, ರಾಮ ರಾವ್, ಚಿರನ್, ಸೋಮಣ್ಣ, ಶೋಭನ್, ವಿನಯ್ ಕೃಷ್ಣ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.