ಮುಂಬೈ :ಇಷ್ಟು ದಿನ ಲವರ್ ಬಾಯ್ ಆಗಿ ಬಿಟೌನ್ನಲ್ಲಿ ಮೋಡಿ ಮಾಡಿದ್ದ ಆದಿತ್ಯ ರಾಯ್ ಕಪೂರ್ ಸದ್ಯ ಅಭಿಮಾನಿಗಳಿಗೆ 'ಏಕ್ ವಿಲನ್' ಆಗಲು ಹೊರಟಿದ್ದಾರೆ. 'ಆಶಿಕಿ -2' ನಂತರ ಮತ್ತೆ ನಟ ಆದಿತ್ಯ ರಾಯ್ ಕಪೂರ್ ಮತ್ತು ನಿರ್ದೇಶಕ ಮೋಹಿತ್ ಸೂರಿ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. 'ಏಕ್ ವಿಲನ್' ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ವಿಡಿಯೋ ಕಾಲ್ ಮೂಲಕ ಚಿತ್ರದ ಕುರಿತು ಮಾತುಕತೆ ನಡೆಸಿದ್ದಾರಂತೆ.
ತನಗೆ ಆದಿಯೊಂದಿಗೆ ಕೆಲಸ ಮಾಡೋದು ಅಂದ್ರೆ ತುಂಬಾ ಇಷ್ಟ. ಪ್ರತಿಸಲ ಅವರಿಗೆ ಉತ್ತಮವಾದುದನ್ನ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಆದಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು, ತುಂಬಾ ಖುಷಿಯಾಗುತ್ತಿದೆ ಅಂತಾ ನಿರ್ದೇಶಕ ಮೋಹಿತ್ ಸೂರಿ ಹೇಳಿಕೊಂಡಿದ್ದಾರೆ.