ಬೆಂಗಳೂರು :ಸ್ಯಾಂಡಲ್ವುಡ್ನಲ್ಲಿ ಡೆಡ್ಲಿ ಸೋಮನೆಂದೇ ಖ್ಯಾತಿ ಪಡೆದಿರುವ ಆದಿತ್ಯಾ ಇದೀಗ ‘ಮಾಸ್ಟರ್’ ಆಗುತ್ತಿದ್ದಾರೆ.ಈ ಹಿಂದೆ ವಿಷ್ಣುವರ್ಧನ್ ಮತ್ತು ಸುಹಾಸಿನಿ ಸ್ಕೂಲ್ ಮಾಸ್ಟರ್ ಸಿನಿಮಾಸಲ್ಲಿ ಅಭಿನಯ ಮಾಡಿದ್ದರು ಆದಿತ್ಯಾ. ಈಗ ಕಮರ್ಷಿಯಲ್ ಸಿನಿಮಾಗಳ ಪಂಟ ಎಂದೇ ಕರೆಸಿಕೊಳ್ಳುವ ಓಂ ಪ್ರಕಾಶ್ ಮಾಸ್ಟರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಆದಿತ್ಯ ಖಡಕ್ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಮಿಂಚು ಹರಿಸಲಿದ್ದಾರಂತೆ.
‘ಡೆಡ್ಲಿ ಸೋಮ’ನಿಗೆ ಹೊಸ ‘ಮಾಸ್ಟರ್’ ಆದರು ನಿರ್ದೇಶಕ ಓಂ ಪ್ರಕಾಶ್ ರಾವ್.. - etv bharat
ಓಂಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿರುವ ಮಾಸ್ಟರ್ ಸಿನಿಮಾದಲ್ಲಿ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಓಂ ಪ್ರಕಾಶ್, ಸಮಾಜದಲ್ಲಿ ನಡೆಯುತ್ತಿರುವ ಇಂದಿನ ಸ್ಥಿತಿಗತಿಗಳನ್ನು ಎಳೆ ಎಳೆಯಾಗಿ ತೋರಿಸುವ ಪ್ರಯತ್ನ ಮಾಡಿದ್ದಾರಂತೆ. ಅಲ್ಲದೆ ಇತ್ತೀಚೆಗೆ ನಡೆದಿರುವ ಪ್ರಪಂಚದ ಘೋರ ಕೃತ್ಯಗಳಾದ ಪುಲ್ವಾಮಾ ದಾಳಿ ಹಾಗೂ ಶ್ರೀಲಂಕಾ ಸ್ಫೋಟದ ಬಗ್ಗೆಯೂ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ.ಆದಿತ್ಯಾರಿಗೆ ಇಬ್ಬರು ನಾಯಕಿಯರಿದ್ದಾರಂತೆ. ಆದರೆ, ನಾಯಕಿಯರು ಯಾರೆಂದು ಇನ್ನೂ ನಿರ್ಧಾರ ಆಗಿಲ್ಲ. ಸಿನಿಮಾ ಚಿತ್ರೀಕರಣವನ್ನು ಮೈಸೂರು, ಕಾಶ್ಮೀರ, ಮಹಾರಾಷ್ಟ್ರದಲ್ಲಿ ಮಾಡಲಾಗಿದೆ. ಶ್ರೀ ರೇಣುಕ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ, ತೆಲುಗು ಮೂಲದ ಜೀವನ್ ಬಾಬು ಸಂಗೀತ ನೀಡಿದ್ದಾರೆ. ಅಣಜಿ ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಲಕ್ಷ್ಮಣ್ ರೆಡ್ಡಿ ಸಂಕಲನ ಚಿತ್ರಕ್ಕಿದೆ.