ಕರ್ನಾಟಕ

karnataka

ETV Bharat / sitara

ಅದಿತಿ ಪ್ರಭುದೇವ ಮೈಮೇಲೆ ಬಂದ 50-90 ದಶಕದ ಮಹಾನಟಿಯರು...! - Aditi prabhudeva saree photo shoot

50-90 ದಶಕದ ಖ್ಯಾತ ನಟಿಯರ ಫೇಸ್​ ಪ್ರಿಂಟ್ ಇರುವ ಸೀರೆ ಉಟ್ಟು ಟಾಪ್ ಹುಡುಗಿ ಅದಿತಿ ಪ್ರಭುದೇವ ಹೊಸ ಫೋಟೋಶೂಟ್ ಮಾಡಿಸಿದ್ದು ಈ ಪೋಟೋಗಳು ಬಹಳ ವೈರಲ್ ಆಗುತ್ತಿವೆ.

Aditi prabhudeva new photo shoot
ಅದಿತಿ ಪ್ರಭುದೇವ ಹೊಸ ಫೋಟೋಶೂಟ್

By

Published : Jul 10, 2020, 11:06 PM IST

Updated : Jul 11, 2020, 12:54 PM IST

ಅದಿತಿ ಪ್ರಭುದೇವ, ಶಾನೆ ಟಾಪಾಗವ್ಳೆ ಹಾಡಿನ ಮೂಲಕ ಪಡ್ಡೆ‌ ಹುಡುಗರ ಹಾಟ್ ಫೇವರೇಟ್ ಆದ ನಟಿ . ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ಹುಡುಗಿ ಲಾಕ್ ಡೌನ್ ಆದಾಗಿನಿಂದ ಸೈಲೆಂಟ್ ಆಗಿದ್ರು. ಆದ್ರೆ ಈಗ ಅದಿತಿ ಭಾರೀ ಸದ್ದು ಮಾಡುತ್ತಿದ್ದಾರೆ.

ಅದಿತಿ ಪ್ರಭುದೇವ ಹೊಸ ಫೋಟೋಶೂಟ್

'ಬ್ರಹ್ಮಚಾರಿ' ಮಡದಿಯ ಮೈ ಮೇಲೆ 50-90 ದಶಕದ ಮಹಾನಟಿಯರು ಬಂದಿದ್ದಾರೆ. ಇದೇನಪ್ಪಾ ಅಂತ ಶಾಕ್ ಆಗಬೇಡಿ. ಅದಿತಿ ಪ್ರಭುದೇವ ಲಾಕ್ ಡೌನ್ ನಂತರ ಬ್ಲ್ಯಾಕ್ ಆ್ಯಂಡ್ ವೈಟ್ ಕಾಂಬಿನೇಷನ್​​ನಲ್ಲಿ ಸೀರೆಯುಟ್ಟು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ಅದಿತಿ ಉಟ್ಟಿರುವ ಸೀರೆಯಲ್ಲಿ ಕನ್ನಡ ಚಿತ್ರರಂಗದ ಮಹಾನಟಿಯರ ಫೇಸ್ ಪ್ರಿಂಟ್ ಇರುವುದು ಈ ಪೋಟೋಶೂಟ್ ವಿಶೇಷ.

ಅದಿತಿ ಪ್ರಭುದೇವ ಹೊಸ ಫೋಟೋಶೂಟ್

50 ರ ದಶಕದಿಂದ 90 ರ ದಶಕದವರೆಗಿನ ಸುಮಾರು 20ಕ್ಕೂ ಹೆಚ್ಚು ಮಹಾನಟಿಯರ ಭಾವಚಿತ್ರಗಳು ಈ ಸೀರೆಯಲ್ಲಿವೆ. ಅಲ್ಲದೆ ಆ ಸೀರೆಗೆ ಮ್ಯಾಚ್ ಆಗುವಂತೆ ಬ್ಲೌಸ್​ ಕೂಡಾ ರೆಡಿ ಮಾಡಿದ್ದಾರೆ ಡಿಸೈನರ್ ಲಕ್ಷ್ಮಿಕೃಷ್ಣ. ಇದೀಗ ಸ್ಯಾಂಡಲ್​ವುಡ್​​​​​ನಲ್ಲೂ ಬಾಲಿವುಡ್​ನಂತೆ ಪರ್ಸನಲ್​ ಫೋಟೋಶೂಟ್ ಟ್ರೆಂಡ್​ ಆಗಿದೆ.

ಅದಿತಿ ಪ್ರಭುದೇವ ಹೊಸ ಫೋಟೋಶೂಟ್

ಸೆಲಬ್ರಿಟಿಗಳು ತಮ್ಮ ಲುಕ್​ ಬದಲಿಸಿದಾಗ ಹೊಸ ಲುಕ್​​​​​​ನಲ್ಲಿ ಫೋಟೋಶೂಟ್ ಮಾಡಿಸ್ತಾರೆ. ವಸ್ತ್ರ ವಿನ್ಯಾಸಕಾರರು ಹೊಸ ಹೊಸ ಡಿಸೈನ್ ತಯಾರಿಸಿದಾಗಲೂ ಈ ರೀತಿ ಫೋಟೋಶೂಟ್ ಕಾಮನ್ ಆಗಿದೆ. ಅದೇ ರೀತಿ ಅದಿತಿ ಹಾಗೂ ಲಕ್ಷ್ಮಿಕೃಷ್ಣ ಕಾಂಬಿನೇಶನ್ ಫೋಟೋಶೂಟ್ ಝುಲಕ್​​​​​​ ಇಲ್ಲಿದೆ ನೋಡಿ.

ಅದಿತಿ ಪ್ರಭುದೇವ ಹೊಸ ಫೋಟೋಶೂಟ್
Last Updated : Jul 11, 2020, 12:54 PM IST

ABOUT THE AUTHOR

...view details