ಕರ್ನಾಟಕ

karnataka

ETV Bharat / sitara

ನಾಳೆ 'ಸೆಂಚುರಿ ಸ್ಟಾರ್' ಹುಟ್ದಬ್ಬ; ಅಡ್ವಾನ್ಸ್ ವಿಶ್ ಮಾಡಿದ ಅದಿತಿ ಪ್ರಭುದೇವ - undefined

ನಾಳೆ ನಟ ಶಿವರಾಜ್​ಕುಮಾರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಈಗಿನಿಂದಲೇ ಸಾಕಷ್ಟು ಅಭಿಮಾನಿಗಳು ಅವರಿಗೆ ಶುಭಾಷಯ ಹೇಳುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ಕೂಡಾ ಶಿವಣ್ಣನಿಗೆ ಅಡ್ವಾನ್ಸ್ ಬರ್ತಡೇ ವಿಶ್ ಮಾಡಿದ್ದಾರೆ.

ಅದಿತಿ ಪ್ರಭುದೇವ

By

Published : Jul 11, 2019, 7:46 PM IST

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್​​ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿಡುತ್ತಿರುವ ಈ 'ಟಗರ' ಶಿವ ಇಂದಿಗೂ ಯೂತ್​​​​​​ ಐಕಾನ್ ಅಂದ್ರೆ ತಪ್ಪಲ್ಲ. 25ರ ಯುವಕರನ್ನೂ ನಾಚಿಸುವ ಎನರ್ಜಿ ಹೊಂದಿರುವ ಇವರು ಇಡೀ ಸಿನಿಮಾ ಇಂಡಸ್ಟ್ರಿಗೆ ಸ್ಫೂರ್ತಿಯಾಗಿದ್ದಾರೆ.

ಶಿವಣ್ಣನಿಗೆ ಬರ್ತಡೇ ವಿಶ್ ಮಾಡಿದ ಅದಿತಿ

ಪ್ರತಿ ವರ್ಷ ಲಕ್ಷಾಂತರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಈ 'ಸಿಂಹದ ಮರಿ' ಈ ಬಾರಿ ಅನಾರೋಗ್ಯದ ಕಾರಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಶಿವಣ್ಣ ಶಸ್ತ್ರಚಿಕಿತ್ಸೆಗಾಗಿ ಲಂಡನ್​​ಗೆ ತೆರಳಿದ್ದಾರೆ. ಈಗಾಗಲೇ 'ಯುವರಾಜ'ನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಬರ್ತಡೇಗೆ ಇನ್ನು ಒಂದು ದಿನ ಬಾಕಿ ಇರುವಾಗಲೇ ನಟಿ ಅದಿತಿ ಪ್ರಭುದೇವ ಶಿವಣ್ಣನಿಗೆ ವಿಶ್ ಮಾಡಿದ್ದಾರೆ. ಅದಿತಿ ಅಣ್ಣಾವ್ರ ಬಹಳ ದೊಡ್ಡ ಅಭಿಮಾನಿ. ಸಾಕಷ್ಟು ಇಂಟರ್​​ವ್ಯೂಗಳಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

'ಶಿವಣ್ಣ ನೀವು ನಮ್ಮಂಥ ಲಕ್ಷಾಂತರ ನಟರಿಗೆ ಸ್ಫೂರ್ತಿ. ಅಲ್ಲದೆ ನಾನು ನಿಮ್ಮ ದೊಡ್ಡ ಫ್ಯಾನ್. ಆ ದೇವರು ನಿಮಗೆ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹ್ಯಾಟ್ರಿಕ್ ಹೀರೋಗೆ ಅದಿತಿ ವಿಶ್ ಮಾಡಿದ್ದಾರೆ. ಹಾಗೂ ನಾಳೆ ಶಿವಣ್ಣನ ಅಭಿಮಾನಿ ಬಳಗ 'ಶಿವಸೈನ್ಯ'ದ ವತಿಯಿಂದ 'ಮಹಾನ್ ಕಲಾವಿದ' ಎಂಬ ಅಲ್ಬಮ್‌ ಸಾಂಗನ್ನು ಬಿಡುಗಡೆ ಮಾಡಲಾಗುತ್ತಿದೆ. ಅವರಿಗೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details