'ಬ್ರಹ್ಮಚಾರಿ' ಚಿತ್ರದ ಸಕ್ಸಸ್ ಮೀಟ್ನಲ್ಲಿ ಅದಿತಿ ಪ್ರಭುದೇವ ಕಣ್ಣೀರು ಹಾಕಿದ್ದಾರೆ. ಇತ್ತೀಚಿಗೆ ನೀವು ತುಂಬಾ ಎಮೋಷನಲ್ ಆಗುತ್ತಿದ್ದೀರಾ ಯಾಕೆ ಎಂದು ಕೇಳಿದ್ದಕ್ಕೆ ನಟಿ ಅದಿತಿ ಗಳಗಳನೆ ಕಣ್ಣೀರು ಭಾವೋದ್ವೇಗಕ್ಕೆ ಒಳಗಾದ್ರು.
'ಬ್ರಹ್ಮಚಾರಿ' ಸಕ್ಸಸ್ ಮೀಟಿಂಗ್ನಲ್ಲಿ ಅದಿತಿ ಕಣ್ಣೀರು ಹಾಕಿದ್ರು.. - ನಟಿ ಅದಿತಿ ಪ್ರಭುದೇವ
ಕ್ಯಾಮರಾಗೆ ಯಾರು ಹೆಚ್ಚು ಕಾಣಿಸುತ್ತಾರೋ ಅಂತವರಿಗೆ ಲೈಫ್ ತುಂಬಾ ಕಷ್ಟ ಅನ್ನಿಸುತ್ತೆ. ನಮ್ಮನ್ನ ಪ್ರೀತಿ ಮಾಡೋರು ಎಷ್ಟು ಇರ್ತಾರೋ ಅಷ್ಟೇ ಹಿಂಸೆ ಕೊಡೋರು ಇರ್ತಾರೆ ಎಂದು ಹೇಳುವ ಮೂಲಕ ಅದಿತಿ ಕಣ್ಣೀರು ಹಾಕಿದ್ದಾರೆ.
ಕ್ಯಾಮರಾಗೆ ಯಾರು ಹೆಚ್ಚು ಕಾಣಿಸುತ್ತಾರೋ ಅಂತವರಿಗೆ ಲೈಫ್ ತುಂಬಾ ಕಷ್ಟ ಅನಿಸುತ್ತೆ. ನಮ್ಮನ್ನ ಪ್ರೀತಿ ಮಾಡೋರು ಎಷ್ಟು ಇರ್ತಾರೋ ಅಷ್ಟೆ ಹಿಂಸೆ ಕೊಡೋರು ಇರ್ತಾರೆ. ಕೆಲವು ವಿಷಯಗಳನ್ನ ಯಾರ ಜೊತೆಗೂ ಹಂಚಿಕೊಳ್ಳಲು ಆಗುವುದಿಲ್ಲ. ಆದರೂ ನಾನು ಹ್ಯಾಪಿ ಆಗಿ ಇದ್ದೇನೆ. ಊರಲ್ಲಿ ನಿಂದಕರು ಇರಬೇಕು, ಊರ ಹೊರಗೆ ಹಂದಿಗಳು ಇರಬೇಕು ಎಂದು ನಮ್ಮ ತಂದೆ ಹೇಳುತ್ತಾರೆ. ಹೀಗೆ ದಾಸರ ಪದಗಳನ್ನು ಹೇಳುತ್ತ ಅದಿತಿ ಕಣ್ಣಲ್ಲಿ ನೀರು ಬಂತು.
ನನ್ನದು ಪುಟ್ಟ ಫ್ಯಾಮಿಲಿ. ಏನೇ ತೊಂದರೆ ಆದ್ರೂ ಕಷ್ಟ ಆಗುತ್ತದೆ. ನಾನು ಈ ಪ್ರಪಂಚದ ಎದುರು ಎಕ್ಸ್ಪೋಸ್ ಆಗಿಲ್ಲ. ಆದ್ದರಿಂದ ಸ್ವಲ್ಪ ಎಮೋಷನ್ ಆಗ್ತೀನಿ ಎಂದು ಹೇಳಿದರು.