ಬೆಂಗಳೂರು: ಬಿಗ್‌ಬಾಸ್ ಸ್ಪರ್ಧಿ ವಾಸುಕಿ ವೈಭವ್ ಹಾಡಿದ ‘ಮನಸ್ಸಿಂದ ಯಾರೂನು ಕೆಟ್ಟೋರಲ್ಲ' ಹಾಡನ್ನು ನಟಿ ಅದಿತಿ ಪ್ರಭುದೇವ ಬಹಳ ಮೆಚ್ಚಿಕೊಂಡಿದ್ದಾರೆ.
ಮನಸ್ಸಿಂದ ಯಾರೂನೂ ಕೆಟ್ಟೋರಲ್ಲ... ಬಿಗ್‌ಬಾಸ್‌ನಲ್ಲಿ ವಾಸುಕಿ ಹಾಡಿದ ಹಾಡು ಅದಿತಿ ಕಂಠಸಿರಿಯಲ್ಲಿ ಕೇಳಿ! - ಅದಿತಿ ಪ್ರಭುದೇವರಿಂದ ಗಾಯನ ಸುದ್ದಿ
ವಾಸುಕಿ ವೈಭವ್ ಹಾಡಿದ ‘ಮನಸ್ಸಿಂದ ಯಾರೂನು ಕೆಟ್ಟೋರಲ್ಲ' ಹಾಡನ್ನು ನಟಿ ಅದಿತಿ ಪ್ರಭುದೇವ ಬಹಳ ಮೆಚ್ಚಿಕೊಂಡಿದ್ದಾರೆ.
ಒಂದು ವಾರದ ಹಿಂದೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್ ಸಿಂಗರ್ ವಾಸುಕಿ ವೈಭವ್ ಹಾಡಿದ್ದ ‘ಮನಸ್ಸಿಂದ ಯಾರೂನು ಕೆಟ್ಟೋರಲ್ಲ‘ ಅನ್ನೋ ಸೋಷಿಯಲ್ ಮೆಸೇಜ್ ಇರೋ ಹಾಡನ್ನೇ ಹಾಡುವ ಮೂಲಕ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಬರ್ತ್ ಡೇಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ರು. ಆದ್ರೆ ಈ ಹಾಡು ಈಗ ದಿನದಿಂದ ದಿನಕ್ಕೆ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಲ್ಲದೆ " ಮನಸ್ಸಿಂದ" ಯಾರು ಕೆಟ್ಟೋರಲ್ಲ ಹಾಡಿಗೆ ಈಗ ಸ್ಯಾಂಡಲ್ವುಡ್ನಲ್ಲಿ ಶಾನೆ ಟಾಪಾಗಿರೋ ನಟಿ ಅದಿತಿ ಪ್ರಭುದೇವ ಕೂಡ ಫ್ಲಾಟ್ ಆಗಿದ್ದಾರೆ.
ಹೌದು, ‘ಬಜಾರ್’ ಪಾರಿ ಅದಿತಿ ಪ್ರಭುದೇವ, ವಾಸುಕಿ ವೈಭವ್ ಹಾಡಿರುವ ಮನಸ್ಸಿಂದ ಯಾರೂನು ಕೆಟ್ಟೋರಲ್ಲ ಹಾಡನ್ನು ಹಾಡಿದ್ದಾರೆ. ಈ ಹಾಡು ಕೇಳಲು ಇಂಪಾಗಿದೆ. ಜೊತೆಗೆ ಒಂದೆರಡು ದಿನಗಳಿಂದ ನನ್ನನ್ನು ಕಾಡಿದಂತಹ ಹಾಡು. ಎಷ್ಟೊಂದು ಸತ್ಯ ಎನಿಸಿದ ಪ್ರತಿ ಸಾಲುಗಳು. ಮೊದಲ ಬಾರಿ ಹಾಡಿದ್ದೇನೆ. ಇಷ್ಟವಾಗದಿದ್ದರೆ ದಯವಿಟ್ಟು ಕ್ಷಮಿಸಿ ಅಂತಾ ಬರೆದುಕೊಂಡು ಈ ಹಾಡನ್ನು ಅದಿತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ಸಾಂಗ್ ಹಾಡೋದಕ್ಕೆ ಕಿಚ್ಚ ಸುದೀಪ್ ಅವ್ರೇ ಸ್ಫೂರ್ತಿ. ಜೊತೆಗೆ ಈ ಹಾಡನ್ನು ಹಾಡೋದಕ್ಕೆ ಸಹಾಯ ಮಾಡಿದ ಧರ್ಮವಿಶ್‌ಗೆ ಅಂಭಿನಂದನೆಗಳು. ಇಂತಹ ಉತ್ತಮ ಸಾಂಗ್ ಸೃಷ್ಟಿಸಿದ ವಾಸುಕಿ ವೈಭವ್‌ಗೆ ಥ್ಯಾಂಕ್ಯ್ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಅದಿತಿ ಸಂತಸ ಹಂಚಿಕೊಂಡಿದ್ದಾರೆ.