ಕರ್ನಾಟಕ

karnataka

ETV Bharat / sitara

ಆರಂಭದ ದಿನವೇ ಆಘಾತ... ಪ್ರಭಾಸ್​​ 'ಆದಿಪುರುಷ್'​​ ಸೆಟ್​​ನಲ್ಲಿ ಬೆಂಕಿ: ವಿಡಿಯೋ ವೈರಲ್​​​ - Adipurush

ಪ್ರಭಾಸ್ ನಟನೆಯ ಆದಿಪುರುಷ್ ಇಂದಿನಿಂದ ಸೆಟ್ಟೇರಿದೆ. ಸಿನಿಮಾ ಆರಂಭವಾದ ಮೊದಲ ದಿನವೇ ಸೆಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ.

ಪ್ರಭಾಸ್​​ ಆದಿಪುರುಷ್​​ ಸೆಟ್​​ನಲ್ಲಿ ಬೆಂಕಿ : ವಿಡಿಯೋ ವೈರಲ್​​​
ಪ್ರಭಾಸ್​​ ಆದಿಪುರುಷ್​​ ಸೆಟ್​​ನಲ್ಲಿ ಬೆಂಕಿ : ವಿಡಿಯೋ ವೈರಲ್​​​

By

Published : Feb 2, 2021, 8:13 PM IST

ಪ್ರಭಾಸ್ ನಟನೆಯ ಆದಿಪುರುಷ್ ಇಂದಿನಿಂದ ಸೆಟ್ಟೇರಿದೆ. ಸಿನಿಮಾ ಆರಂಭವಾದ ಮೊದಲ ದಿನವೇ ಸೆಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ.

ಮುಂಬೈನ ಗೋರೆಗಾಂವ್ ಪ್ರದೇಶದ ಇನೋರ್ಬಿಟ್ ಮಾಲ್‌ನ ಹಿಂಭಾಗದಲ್ಲಿರುವ ರೆಟ್ರೊ ಮೈದಾನದಲ್ಲಿ ಸಿನಿಮಾದ ಶೂಟಿಮಗ್​​ ಸೆಟ್​​ ಹಾಕಲಾಗಿತ್ತು.

ಶೂಟಿಂಗ್​ ಸೆಟ್​​ನಲ್ಲಿ 50-60 ಜನ ಇದ್ದು, ಸಂಜೆ 4: 15ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಇದೀಗ ಸೆಟ್​​ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್​ ಆಗುತ್ತಿದೆ.

ಈ ಸಿನಿಮಾಕ್ಕೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್​​ ಹೇಳುತ್ತಿದ್ದಾರೆ. ರಾಮಾಯಣ ಆಧಾರಿತ ಆದಿಪುರುಷ್ ಸಿನಿಮಾ ಬಹುಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ಪ್ರಭಾಸ್ ಬಣ್ಣ ಹಚ್ಚುತ್ತಿದ್ರೆ, ನಟ ಸೈಫ್ ಅಲಿಖಾನ್ ರಾವಣನ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.

ABOUT THE AUTHOR

...view details