ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ಯಶಸ್ವಿ ಮೂರನೇ ವಾರ ಪ್ರದರ್ಶನವಾಗುತ್ತಿದೆ. ಬಿಡುಗಡೆಯಾದ ಎಲ್ಲ ಸೆಂಟರ್ಗಳಲ್ಲೂ ಹೌಸ್ಪುಲ್ ಪ್ರದರ್ಶನ ಕಾಣುತ್ತಿದ್ದು, ಅಧ್ಯಕ್ಷ ಶರಣ್ ಹ್ಯಾಟ್ರಿಕ್ ಬಾರಿಸಿದ್ದಾರೆ. ಅಲ್ಲದೆ ಅಧ್ಯಕ್ಷ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದ್ದು ನಿರ್ಮಾಪಕನ ಜೇಬು ತುಂಬಿಸಿದ್ದಾನೆ.
ಚಿತ್ರದ ಗೆಲುವಿಗೆ ಕಾರಣರಾದ ಕನ್ನಡಿಗರಿಗೆ ಧನ್ಯವಾದ ಹೇಳಿದ 'ಅಧ್ಯಕ್ಷ ಇನ್ ಅಮೆರಿಕ' ತಂಡ - ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಸಕ್ಸಸ್ ಪ್ರೆಸ್ಮೀಟ್
ನಮ್ಮ ಜೋಡಿಯನ್ನು ಜನರು ಮೆಚ್ಚಿ ನಾವು ನಿರೀಕ್ಷೆ ಮಾಡದೇ ಇರುವಷ್ಟು ಪ್ರೀತಿ ಹಂಚಿದ್ದಾರೆ. ಸಿನಿಮಾ ಖಂಡಿತ ಸಕ್ಸಸ್ ಆಗುತ್ತೆ ಎನ್ನುವುದು ಗೊತ್ತಿತ್ತು. ಆದರೆ ಇಷ್ಟು ದೊಡ್ಡಮಟ್ಟದ ಗೆಲುಗು ಸಿಗಲಿದೆ ಎಂದುಕೊಂಡಿರಲಿಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ.
ಈ ಖುಷಿ ಹಂಚಿಕೊಳ್ಳಲು ಚಿತ್ರತಂಡ ನಿನ್ನೆ ಸಕ್ಸಸ್ ಮೀಟ್ ಏರ್ಪಡಿಸಿತ್ತು. ನಿರ್ಮಾಪಕರು ಚಿತ್ರದ ನಟ, ನಿರ್ದೇಶಕರಿಗೆ ನೆನಪಿನ ಕಾಣಿಕೆ ನೀಡಿ ಚಿತ್ರದ ಗೆಲುವನ್ನು ಸಂಭ್ರಮಿಸಿದರು. 'ಅಧ್ಯಕ್ಷ ಇನ್ ಅಮೆರಿಕ' ಚಿತ್ರವನ್ನು ಆಂಧ್ರ ಮೂಲದ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿ ಟಿ.ಜಿ. ವಿಶ್ವನಾಥ್ ಹಾಗೂ ವಿವೇಕ್ ಕುಚ್ಚಿಬೋಟ್ಲಾ ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಗೆಲ್ಲಿಸಿದ ಕನ್ನಡಿಗರಿಗೆ ಚಿತ್ರತಂಡ ಧನ್ಯವಾದ ಹೇಳಿದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ನಮ್ಮ ಪ್ರೊಡಕ್ಷನ್ನಲ್ಲಿ ನಿರ್ಮಾಣವಾದ ಮೊದಲ ಸಿನಿಮಾ ಇದು ಎಂದು ಸಂತೋಷ ವ್ಯಕ್ತಪಡಿಸಿದರು.
ಇನ್ನು ಮೊದಲ ಚಿತ್ರದಲ್ಲೇ ಸಕ್ಸಸ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಯೋಗಾನಂದ್, ನನ್ನ ಮುಂದಿನ ಚಿತ್ರಕ್ಕೆ ಇದು ಸ್ಫೂರ್ತಿಯಾಗಿದೆ. ಅಲ್ಲದೇ ಜವಾಬ್ದಾರಿಯೂ ಹೆಚ್ಚಾಗಿದೆ ಎಂದರು. ಚಿತ್ರದಲ್ಲಿ ರಾಗಿಣಿ ಹಾಗೂ ಶರಣ್ ಇಬ್ಬರ ಕಾಂಬಿನೇಷನ್ ಸಖತ್ ವರ್ಕೌಟ್ ಆಗಿದೆ. 'ನಮ್ಮ ಜೋಡಿಯನ್ನು ಜನರು ಮೆಚ್ಚಿ ನಾವು ನಿರೀಕ್ಷೆ ಮಾಡದೆ ಇರುವಷ್ಟು ಪ್ರೀತಿ ಹಂಚಿದ್ದಾರೆ. ಸಿನಿಮಾ ಖಂಡಿತ ಸಕ್ಸಸ್ ಆಗುವುದು ಎಂದು ಗೊತ್ತಿತ್ತು. ಆದರೆ, ಇಷ್ಟು ದೊಡ್ಡಮಟ್ಟದ ಗೆಲುಗು ಸಿಗಲಿದೆ ಎಂದುಕೊಂಡಿರಲಿಲ್ಲ. ನಮಗೆ ಇಷ್ಟು ಪ್ರೀತಿ ಹಂಚಿದ ಕನ್ನಡಿಗರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಚಿತ್ರವನ್ನು ಒಪ್ಪಿ, ಅಪ್ಪಿಕೊಂಡ ಸಿನಿಪ್ರಿಯರಿಗೆ ರಾಗಿಣಿ ಹಾಗೂ ಶರಣ್ ಧನ್ಯವಾದ ಹೇಳಿದರು.