ಕರ್ನಾಟಕ

karnataka

ETV Bharat / sitara

ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನ ಮಾಡಲಾಗದಿದ್ದರೂ ಸರಿ, ಕೆಡಕನ್ನು ಬಯಸಬೇಡಿ: ಅದಿತಿ ಪ್ರಭುದೇವ - ಅದಿತಿ ಪ್ರಭುದೇವ

ಪಶು ವೈದ್ಯೆ ಮೇಲೆ ರಾಕ್ಷಸಿ ಕೃತ್ಯವೆಸಗಿದ ಅತ್ಯಾಚಾರಿಗಳನ್ನು ಎನ್​ಕೌಂಟರ್​ ಮಾಡಿ ಸಾಯಿಸಿದರು ಎಂಬ ಸುದ್ದಿ ಕೇಳುತ್ತಿದ್ದಂತೆ ನನಗೆ ತುಂಬಾ ಖುಷಿಯಾಯಿತು. ಅಂದು ನನಗೆ ಕರೆ ಮಾಡಿದವರಿಗೆಲ್ಲ ಕಂಗ್ರಾಜುಲೇಷನ್ಸ್​​ ಹೇಳಿದೆ ಎಂದು ನಟಿ ಅದಿತಿ ಪ್ರಭುದೇವ ಖುಷಿಯಿಂದಲೇ ತಿಳಿಸಿದ್ರು.

Adhithi
ಅದಿತಿ ಪ್ರಭುದೇವ

By

Published : Dec 8, 2019, 4:59 PM IST

ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನು ಮಾಡಲಿಕ್ಕೆ ಆಗದಿದ್ರೂ ಪರವಾಗಿಲ್ಲ. ಆದ್ರೆ ಕೆಟ್ಟದ್ದನ್ನು ಮಾತ್ರ ಮಾಡಬೇಡಿ. ಸಪೋರ್ಟ್ ಮಾಡಿ. ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡೋಣವೆಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.

ಬ್ರಹ್ಮಚಾರಿ ಸಕ್ಸಸ್​​ ಮೀಟ್​​ನಲ್ಲಿ ಮಾತನಾಡಿದ ನಟಿ, ಇತ್ತೀಚೆಗಷ್ಟೇ ತೆಲಂಗಾಣದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳಿಗೆ ಹೈದರಾಬಾದ್ ಪೊಲೀಸರು ಎನ್​​ಕೌಂಟರ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಪಶು ವೈದ್ಯೆ ಮೇಲಿನ ಅತ್ಯಾಚಾರ ವಿಚಾರ ತುಂಬಾ ನೋವನ್ನುಂಟುಮಾಡಿತ್ತು. ಆ ಘಟನೆ ನಡೆದ ಮಾರನೇ ದಿನ ನನಗೆ ನೈಟ್ ಶೂಟಿಂಗ್ ಇತ್ತು. ಎಂದೂ ನನ್ನ ಜೊತೆ ಶೂಟಿಂಗ್​ಗೆ ಬಾರದ ನನ್ನ ತಂದೆ ಅಂದು ಪುಟ್ಟ ನಾನು ಬರ್ತೀನಿ ಎಂದಾಗ ಎಂಥಾ ಪರಿಸ್ಥಿತಿ ಬಂತು ಎಂದು ಯೋಚಿಸಿದೆ ಎಂದು ಅದಿತಿ ತಿಳಿಸಿದ್ರು.

ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನ ಮಾಡಲಾಗದಿದ್ದರೂ ಕೆಡಕನ್ನು ಬಯಸಬೇಡಿ : ಅದಿತಿ ಪ್ರಭುದೇವ

ಜೀವಂತವಾಗಿರುವಾಗಲೇ ಸುಡುತ್ತಾರೆ ಎಂದರೆ ಆ ವ್ಯಕ್ತಿಗಳಿಗೆ ಎಂತಾ ವಿಕೃತ ಮನಸ್ಸಿರಬಹುದು. ಇಂತಹ ಘಟನೆಗಳು ನಡೆದಾಗ ಹೆಣ್ಣು ಮಕ್ಕಳ ಅಪ್ಪ-ಅಮ್ಮಂದಿರಿಗೆ ತುಂಬಾ ಆತಂಕ ಕಾಡುತ್ತೆ. ನಮಗೂ ಭಯ ಆಗುತ್ತೆ ಎಂದು ಅದಿತಿ ಭಾವುಕರಾದ್ರು.

ಇನ್ನು ಆ ಅತ್ಯಾಚಾರಿಗಳನ್ನು ಎನ್​ಕೌಂಟರ್​ ಮಾಡಿ ಸಾಯಿಸಿದರು ಎಂಬ ಸುದ್ದಿ ಕೇಳುತ್ತಿದ್ದಂತೆ ನನಗೆ ತುಂಬಾ ಖುಷಿಯಾಯಿತು. ಅಂದು ನನಗೆ ಕರೆ ಮಾಡಿದವರಿಗೆಲ್ಲ ಕಂಗ್ರಾಜುಲೇಷನ್ಸ್​​ ಹೇಳಿದೆ ಎಂದು ನಟಿ ಖುಷಿಯಿಂದಲೇ ಹೇಳಿದ್ರು.

ABOUT THE AUTHOR

...view details