ಅಂಬಾರಿ, ಅದ್ಧೂರಿ, ಕಿಸ್ಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಎ.ಪಿ.ಅರ್ಜುನ್ ಈಗ ಮತ್ತೆ 'ಅದ್ಧೂರಿ ಲವರ್' ಹಿಂದೆ ಬಿದ್ದಿದ್ದಾರೆ. ಅದ್ರೆ ಅರ್ಜುನ್ ಅದ್ಧೂರಿ ಲವರ್ ಸಾರಥ್ಯವನ್ನು ತನ್ನ ಶಿಷ್ಯನಿಗೆ ವಹಿಸಿ, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
'ಅದ್ಧೂರಿ ಲವರ್'ಗೆ ಸಾಥ್ ಕೊಟ್ರು ರವಿಮಾಮ - ಭರತ್ ರಾಘವೇಂದ್ರ
ನಿರ್ದೇಶಕ ಅರ್ಜುನ್, ಎ.ಪಿ.ಅರ್ಜುನ್ ಫಿಲಂ ಬ್ಯಾನರ್ನಲ್ಲಿ ಕಿಸ್ ಚಿತ್ರದ ನಂತ್ರ ಅದ್ಧೂರಿ ಲವರ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತನ್ನ ಗರಡಿಯಲ್ಲೇ ಪಳಗಿರುವ ಭರತ್ ರಾಘವೇಂದ್ರಗೆ ನಿರ್ದೇಶಕನ ಪಟ್ಟ ಕಟ್ಟಿದ್ದು, ಇಂದು ಅದ್ಧೂರಿ ಲವರ್ ಚಿತ್ರ ಸೆಟ್ಟೇರಿದೆ.
'ಅದ್ದೂರಿ ಲವರ್'ಗೆ ಸಾಥ್ ಕೊಟ್ರು ರವಿಮಾಮ
ಹೌದು, ನಿರ್ದೇಶಕ ಅರ್ಜುನ್, ಎ.ಪಿ.ಅರ್ಜುನ್ ಫಿಲಂ ಬ್ಯಾನರ್ನಲ್ಲಿ ಕಿಸ್ ಚಿತ್ರದ ನಂತ್ರ ಅದ್ಧೂರಿ ಲವರ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತನ್ನ ಗರಡಿಯಲ್ಲೇ ಪಳಗಿರುವ ಭರತ್ ರಾಘವೇಂದ್ರಗೆ ನಿರ್ದೇಶಕನ ಪಟ್ಟ ಕಟ್ಟಿದ್ದು, ಇಂದು ಅದ್ಧೂರಿ ಲವರ್ ಚಿತ್ರ ಸೆಟ್ಟೇರಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ವಿಶ್ ಮಾಡಿದ್ರು.
ಅದ್ಧೂರಿ ಲವರ್ ಚಿತ್ರದಲ್ಲಿ ವಿರಾಟ್ ಮತ್ತು ಸಮಜಾನ ಆನಂದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.